Home Uncategorized ಉಡುಪಿ: ಜಾಮಿಯಾ ಮಸೀದಿಯಲ್ಲಿ ಕಾರ್ಯದರ್ಶಿ ಮೇಲೆ ಹಲ್ಲೆ : 5 ಮಂದಿ ವಿರುದ್ಧ ಪ್ರಕರಣ ದಾಖಲು…!!

ಉಡುಪಿ: ಜಾಮಿಯಾ ಮಸೀದಿಯಲ್ಲಿ ಕಾರ್ಯದರ್ಶಿ ಮೇಲೆ ಹಲ್ಲೆ : 5 ಮಂದಿ ವಿರುದ್ಧ ಪ್ರಕರಣ ದಾಖಲು…!!

ಉಡುಪಿ: ಜುಮಾ ನಮಾಝ್ ಬಳಿಕ ಜಾಮಿಯಾ ಮಸೀದಿ ಒಳಗೆ ಕಾರ್ಯದರ್ಶಿ ಮೇಲೆ ಹಲ್ಲೆ ನಡೆದ ಘಟನೆ ಉಡುಪಿಯಲ್ಲಿ ನಡೆದಿದೆ.

ದೂರುದಾರ ಖಾಲೀದ್ ಅಬ್ದುಲ್ ಅಜೀಜ್, ಕಾರ್ಯದರ್ಶಿ ಜಾಮಿಯಾ ಮಸೀದಿ ಉಡುಪಿ. ಅ.9 ರಂದು ಶುಕ್ರವಾರ ಮಧ್ಯಾಹ್ನ 1:45ಕ್ಕೆ ಜುಮಾ ನಮಾಝ್ ನಂತರ ಮಸೀದಿ ಒಳಗಡೆ ಆರೋಪಿಗಳಾದ ನಝೀರ್ ಅಹ್ಮದ್, ಶಂಶುದ್ದೀನ್, ಹನೀಫ್, ಬಶೀರ್ ಅಬ್ದುಲ್ ರಹಮಾನ್ ಮತ್ತು ಅಝರ್ ಇವರು ನಾಲ್ಕೂ ದಿಕ್ಕಿನಿಂದ ಸುತ್ತುವರಿದು ದೂರುದಾರರ ಮುಖ, ತಲೆ ಮತ್ತು ಮೂಗಿನ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ.

ಜೀವ ಉಳಿಸಿಕೊಳ್ಳಲು ದೂರುದಾರರು ಮಸೀದಿ ಒಳಾಂಗಣದ ಕಡೆಗೆ ಓಡಿದಾಗಲೂ ಆರೋಪಿಗಳು ಬೆನ್ನಟ್ಟಿ ಹಿಡಿದು ಮತ್ತೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ “ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.