Home Crime ನೌಕಾಪಡೆಯ ಹಡಗುಗಳ ರಹಸ್ಯ ಮಾಹಿತಿ ವಿದೇಶಕ್ಕೆ ರವಾನೆ ಪ್ರಕರಣ : 5ನೇ ಆರೋಪಿ ಸೆರೆ…!!

ನೌಕಾಪಡೆಯ ಹಡಗುಗಳ ರಹಸ್ಯ ಮಾಹಿತಿ ವಿದೇಶಕ್ಕೆ ರವಾನೆ ಪ್ರಕರಣ : 5ನೇ ಆರೋಪಿ ಸೆರೆ…!!

ಉಡುಪಿ : ನೌಕಾಪಡೆಯ ಹಡಗುಗಳ ರಹಸ್ಯ ಮಾಹಿತಿಯನ್ನು ಅನಧಿಕೃತವಾಗಿ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಅಪರಾಧ ಕ್ರಮಾಂಕ 128/2025ರಲ್ಲಿ ಸಂಬಂಧಿಸಿ 5ನೇ ಆರೋಪಿಯನ್ನು ಬಂಧಿಸಲಾಗಿದೆ.

ಈ ಪ್ರಕರಣವು ಕಲಂ 152, 61(1) BNS 2023, ಕಲಂ 3 ಮತ್ತು 5 Official Secrets Act ಹಾಗೂ ಕಲಂ 18 Unlawful Activities (Prevention) Act ಅಡಿ ದಾಖಲಾಗಿದ್ದು, ರಾಷ್ಟ್ರ ಭದ್ರತೆಗೆ ಸಂಬಂಧಿಸಿದ ಗಂಭೀರ ಅಂಶಗಳನ್ನು ಒಳಗೊಂಡಿದೆ.

ಬಂಧಿತನನ್ನು ಆಲಿಫ್ ಇಸ್ಲಾಮ್ (21) ಎಂದು ಗುರುತಿಸಲಾಗಿದೆ. ಈತ ಮೂಲತಃ ಪಶ್ಚಿಮ ಬಂಗಾಲ ರಾಜ್ಯದ ಜಾಲ್ ಫೈಗುರಿ ಜಿಲ್ಲೆಯ ಬರಗಾರಿಯ ಗ್ರಾಮದ ನಿವಾಸಿ. ಪ್ರಸ್ತುತ ಕೇರಳ ರಾಜ್ಯದ ಇಡುಕಿ ಜಿಲ್ಲೆಯ ಮುನಾರ್ ತಾಲೂಕಿನ ಮರಾಯು ಗ್ರಾಮದ ಕೋಕಿಲ್ಕಟ್ಟ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ಫೆಬ್ರವರಿ 21, 2026ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಮಲ್ಪೆ ಪೊಲೀಸರು ಮುಂದುವರಿಸಿದ್ದಾರೆ.