ಅಜೆಕಾರು: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಕುಕ್ಕುಜೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ನುಗ್ಗಿದ ಕಳ್ಳರು, ಕಂಪ್ಯೂಟರ್ ಸಹಿತ ಸೊತ್ತು ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅ.24ರ ಮಧ್ಯಾಹ್ನದಿಂದ ಅ.27ರ ಬೆಳಗಿನ ಮಧ್ಯಾವಧಿಯಲ್ಲಿ ಶಾಲೆಯ ಕಂಪ್ಯೂಟರ್ ಕೊಠಡಿಯ ಕಿಟಕಿಯ ಕಬ್ಬಿಣದ ರಾಡನ್ನು ಮುರಿದ ಕಳ್ಳರು, ಕಿಟಿಕಿಯ ಪಕ್ಕ ಇರಿಸಲಾಗಿದ್ದ ಕಂಪ್ಯೂಟರ್ ಮತ್ತು ಒಂದು ಕೀ ಬೋರ್ಡ್ ಹಾಗೂ ಕಂಪ್ಯೂಟರನ ಪವರ್ ಅಡಾಪ್ಟನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಹೇಳಲಾಗಿದೆ.
ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



