Home Crime ಮಲ್ಪೆ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ…!!

ಮಲ್ಪೆ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ…!!

ಮಲ್ಪೆ: ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ಅಂಬಲಪಾಡಿ ದೆವರಕೆರೆಯಲ್ಲಿ ನಡೆದಿದೆ.

ಮೃತರು ಐರಿನ್ ಮಾಬಿನ್ (57), ಅಂಬಲಪಾಡಿ ದೆವರಕೆರೆಯ ಮಗನ ಮನೆಯ ನಿವಾಸಿ ಎಂದು ತಿಳಿದು ಬಂದಿದೆ.

ಅ.26 ರಂದು ಮಧ್ಯಾಹ್ನ 2:30ಕ್ಕೆ ಐರಿನ್ ಅವರು ಊಟ ಮಾಡಿ ಮಲಗುವುದಾಗಿ ಹೇಳಿ ರೂಂಗೆ ಹೋಗಿದ್ದರು. ಸಂಜೆ 4:30ಕ್ಕೆ ಪತಿ ಎಬ್ಬಿಸಲು ರೂಂ ಒಳಗೆ ಹೋಗಿ ನೋಡಿದಾಗ ಐರಿನ್ ಬೆಡ್ ರೂಂನ ಕಬೋರ್ಡ್ ಬಾಗಿಲಿಗೆ ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.