Home Crime ಕೋಟ: ದೇವಸ್ಥಾನದಲ್ಲಿ ಕಳ್ಳತನ : ಹುಂಡಿ, ಪೂಜಾ ಸಾಮಗ್ರಿ ಕಳವು…!!

ಕೋಟ: ದೇವಸ್ಥಾನದಲ್ಲಿ ಕಳ್ಳತನ : ಹುಂಡಿ, ಪೂಜಾ ಸಾಮಗ್ರಿ ಕಳವು…!!

ಕೋಟ: ಬ್ರಹ್ಮಾವರ ತಾಲೂಕು ಕಾವಾಡಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಾಗಿಲು ಮುರಿದು ಪೂಜಾ ಸಾಮಗ್ರಿಗಳು ಹಾಗೂ ಕಾಣಿಕೆ ಹುಂಡಿ ಕಳ್ಳತನ ಮಾಡಿದ ಘಟನೆ ನಡೆದಿದೆ.

ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಉದಯ ಚಂದ್ರ ಶೆಟ್ಟಿ (73) ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.25 ರಂದು ಸಂಜೆ 6:30ಕ್ಕೆ ಅರ್ಚಕರ ಪತ್ನಿ ವಸಂತಿ ಆರ್ ಅಡಿಗ ಅವರು ಸಂಜೆ ಪೂಜೆ ಮುಗಿಸಿ ದೇವಸ್ಥಾನದ ಬಾಗಿಲು ಹಾಕಿಕೊಂಡು ಹೋಗಿದ್ದರು. ಅ.26 ರಂದು ಬೆಳಗ್ಗೆ 7 ಗಂಟೆಗೆ ಅವರು ಕರೆ ಮಾಡಿ ದೇವಸ್ಥಾನದ ಹಿಂದಿನ ಬಾಗಿಲು ತೆರೆದಿರುವುದಾಗಿ ಹಾಗೂ ದಿನನಿತ್ಯದ ಪೂಜಾ ಸಾಮಗ್ರಿ ಹಾಗೂ ಕಾಣಿಕೆ ಹುಂಡಿ ಕಳವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ಟ್ರಸ್ಟಿ ಉದಯ ಚಂದ್ರ ಶೆಟ್ಟಿ ಅವರು ದೇವಸ್ಥಾನಕ್ಕೆ ಬಂದು ನೋಡಿದಾಗ ಹಿಂದಿನ ಬಾಗಿಲು ಮುರಿದು, ತಾಮ್ರದ ಕೊಡಪಾನ-5, ತಾಮ್ರದ ಹರಿವಾಣ-4, ತಾಮ್ರದ ಚಂಬು-3, ಹಿತ್ತಾಳೆ ಹರಿವಾಣ-1 ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಅಂದಾಜು 40-45 ಸಾವಿರ ರೂ. ನಗದು ಕಳವಾಗಿರುವುದು ಕಂಡುಬಂದಿದೆ. ಒಟ್ಟು ಕಳವಾದ ಮೌಲ್ಯ ಸುಮಾರು 60,000 ರೂ. ಎಂದು ಅಂದಾಜಿಸಲಾಗಿದೆ.

ಅ.25 ರ ಸಂಜೆ 6:30 ರಿಂದ ಅ.26 ರ ಬೆಳಗ್ಗೆ 7 ಗಂಟೆಯ ನಡುವೆ ಕಳ್ಳರು ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಕೈಗೊಂಡಿದ್ದಾರೆ.