Home Crime ಕಾರ್ಕಳ: ಬೆಂಗಳೂರಿಗೆ ಕೆಲಸಕ್ಕೆ ಹೊರಟ ಯುವಕ ನಾಪತ್ತೆ…!!

ಕಾರ್ಕಳ: ಬೆಂಗಳೂರಿಗೆ ಕೆಲಸಕ್ಕೆ ಹೊರಟ ಯುವಕ ನಾಪತ್ತೆ…!!

ಕಾರ್ಕಳ: ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಿಂದ ಹೊರಟ ಯುವಕ ನಾಪತ್ತೆಯಾದ ಘಟನೆ ನಿಂಜೂರು ಗ್ರಾಮದಲ್ಲಿ ನಡೆದಿದೆ.

ನಾಪತ್ತೆಯಾದವರು ಅಕ್ಷಯ ಆಚಾರ್ಯ (30), ನಿಂಜೂರು ಗ್ರಾಮದ ಎಡ್ಮೇರು ನಿವಾಸಿ.

ಅಕ್ಷಯ ಆಚಾರ್ಯ ಬೆಂಗಳೂರಿನಲ್ಲಿ ಹೋಟೆಲ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ಅ.17 ರಂದು ಊರಿಗೆ ಬಂದಿದ್ದರು. ಬೆಂಗಳೂರಿನ ಹೋಟೆಲ್ ಮಾಲೀಕರು ಕೆಲಸಕ್ಕೆ ವಾಪಸ್ ಬರುವಂತೆ ಕರೆ ಮಾಡಿದ ಹಿನ್ನೆಲೆಯಲ್ಲಿ ಅ.17 ರಂದು ತಮ್ಮ ವಾಸದ ಮನೆಯಾದ ನಿಂಜೂರಿನ ಎಡ್ಮೇರುವಿನಿಂದ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು, ಬೆಂಗಳೂರಿಗೆ ಕೆಲಸಕ್ಕೂ ಹೋಗದೆ, ಮನೆಗೂ ವಾಪಸ್ ಬಾರದೆ ಕಾಣೆಯಾಗಿದ್ದಾರೆ.

ತಂದೆ ಬಾಲಕೃಷ್ಣ ಆಚಾರ್ಯ (62) ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 134/2026ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.