ಉಡುಪಿ: ದೊಡ್ಡಣಗುಡ್ಡೆಯ ಸರಕಾರಿ ಬಾಲಕರ ಬಾಲಮಂದಿರದ ಒಳಾಂಗಣದಲ್ಲಿ ಹಾವೊಂದು ಕಾಣಿಸಿಕೊಂಡು ಭಯದ ವಾತಾವರಣ ಸೃಷ್ಟಿಯಾಯಿತು. ತಕ್ಷಣ ಬಾಲಮಂದಿರದ ಮೇಲ್ವಿಚಾರಕರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು.

ತಕ್ಷಣ ನೆರವಿಗೆ ಬಂದ ಒಳಕಾಡುರವರು, ಉರಗರಕ್ಷಕರಾದ ಬಶೀರ್ ಎಂಬವರನ್ನು ಸ್ಥಳಕ್ಕೆ ಕರೆಯಿಸಿಕೊಂಡು, ಹಾವನ್ನು ಸೆರೆಹಿಡಿಸಿ, ಸುರಕ್ಷಿತ ಸ್ಥಳಕ್ಕೆ ಬಿಡುಗಡೆಗೊಳಿಸುವ ವ್ಯವಸ್ಥೆಗೊಳಿಸಿದರು. ರಕ್ಷಿಸಲ್ಪಟ್ಟ ಹಾವು ವಿಷಕಾರಿ ಅಲ್ಲವೆಂದು ಉರಗತಜ್ಞರು ಖಚಿತಪಡಿಸಿದರು.



