ಕೋಟ: ದನ ಮೇಯಿಸಲು ಹೋದ ವೃದ್ಧರೊಬ್ಬರು ಗೇರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಅವರ್ಸೆ ಗ್ರಾಮದಲ್ಲಿ ನಡೆದಿದೆ.
ಮೃತರು ಬಿ. ಆನಂದ (65) ಅವರ್ಸೆ ಗ್ರಾಮ, ಬ್ರಹ್ಮಾವರ ತಾಲೂಕು. ಅ.24 ರಂದು ಬೆಳಿಗ್ಗೆ 7 ಗಂಟೆಗೆ ಮನೆಯ ದನವನ್ನು ಮೇಯಲು ಕಟ್ಟಲು ತೆಗೆದುಕೊಂಡು ಹೋಗಿದ್ದರು. ಬಹಳ ಸಮಯವಾದರೂ ವಾಪಸ್ ಬಾರದಿದ್ದಾಗ ಮಗ ಪ್ರವೀಣ್ (36) ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೆ ಬಳಿಯ ಗದ್ದೆ ಬಯಲಿನಲ್ಲಿ ಹುಡುಕಾಡಿದಾಗ, ಗದ್ದೆಯ ಬಳಿ ಇದ್ದ ಗೇರು ಮರಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಕೈಗೊಂಡಿದ್ದಾರೆ.



