Home Crime ಬ್ರಹ್ಮಾವರ: ಇಲಿ ಪಾಷಾಣ ಸೇವಿಸಿ ವೃದ್ಧೆ ಆತ್ಮಹತ್ಯೆ…!!

ಬ್ರಹ್ಮಾವರ: ಇಲಿ ಪಾಷಾಣ ಸೇವಿಸಿ ವೃದ್ಧೆ ಆತ್ಮಹತ್ಯೆ…!!

ಬ್ರಹ್ಮಾವರ: ಮನೆಯಲ್ಲಿ ಒಬ್ಬರೇ ವಾಸವಾಗಿದ್ದ ವೃದ್ಧೆಯೊಬ್ಬರು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಂಜೂರು ಗ್ರಾಮದ ಬಲ್ಲೆಬೈಲಿನಲ್ಲಿ ನಡೆದಿದೆ.

ಮೃತರು ಗಿರಿಜಾ (72) ಕೆಂಜೂರು ಗ್ರಾಮದ ಬಲ್ಲೆಬೈಲು ನಿವಾಸಿ. ಇವರು ಒಬ್ಬರೇ ವಾಸವಾಗಿದ್ದು, ಮಕ್ಕಳು ಕೆಲಸದ ನಿಮಿತ್ತ ಬೇರೆ ಊರಿನಲ್ಲಿದ್ದಾರೆ. ಒಬ್ಬರೇ ಇದ್ದುದರಿಂದ ಮಾನಸಿಕ ಖಿನ್ನತೆಯಿಂದ ಅಥವಾ ಇನ್ನಾವುದೋ ಕಾರಣದಿಂದ ಮನನೊಂದು ಅ.23 ರಂದು ಸಂಜೆ 7:49ಕ್ಕೆ ಮನೆಯಲ್ಲಿ ಇಲಿ ಪಾಷಾಣ ಸೇವಿಸಿದ್ದಾರೆ.

ತಕ್ಷಣ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅ.24 ರಂದು ಬೆಳಿಗ್ಗೆ 9 ಗಂಟೆಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ದೂರುದಾರರು ಮೊಮ್ಮಗಳು ದೀಪಾ ಶೆಟ್ಟಿ (35) ಕಳ್ತೂರು ಸಂತೆಕಟ್ಟೆ ಗ್ರಾಮದವರು.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.