Home Crime ಅಕ್ರಮ ಗಾಂಜಾ ಸಾಗಾಟ : ಇಬ್ಬರು ಆರೋಪಿಗಳ ಬಂಧನ…!!

ಅಕ್ರಮ ಗಾಂಜಾ ಸಾಗಾಟ : ಇಬ್ಬರು ಆರೋಪಿಗಳ ಬಂಧನ…!!

ಉಡುಪಿ : ನಗರದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಕೃಷ್ಣ ಆಚಾರಿ ಮತ್ತು ಅಬ್ದುಲ್ ಜಬ್ಬಾರ್ ಎಂದು ಗುರುತಿಸಲಾಗಿದೆ.

ಘಟನೆ ವಿವರ : ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿರುವ ಆರೋಪಿಗಳ ಬಗ್ಗೆ ಕಡಿವಾಣ ಹಾಕಲು ಹಾಗೂ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ತಡೆಗಟ್ಟುವ ಉದ್ದೇಶದಿಂದ ಪದೇ ಪದೇ ಪ್ರಕರಣಗಳಲ್ಲಿ ಭಾಗಿಯಾಗಿರುವ ಜಿಲ್ಲೆಯ ಹಲವು ಠಾಣೆಯಲ್ಲಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ವಿರುದ್ದ ಪಿಟ್ ಎನ್.ಡಿ.ಪಿ.ಎಸ್ ಕಾಯಿದೆ ಅಡಿಯಲ್ಲಿ 1) ಕೃಷ್ಣ ಆಚಾರಿ @ ಕೃಷ್ಣ(43), ಕೊಳಲಗಿರಿ ಉಪ್ಪೂರು ಗ್ರಾಮ, ಬ್ರಹ್ಮಾವರ 2)ಅಬ್ದುಲ್‌ ಜಬ್ಬಾರ್‌ @ ಜಬ್ಬಾರ್‌ (27), ಕೇಳಾರ್ಕಳಬೆಟ್ಟು, ಉಡುಪಿ ಎಂಬ ಇಬ್ಬರನ್ನು ಕೇಂದ್ರಕಾರಾಗೃಹ ದಾರವಾಡಕ್ಕೆ ಕಳುಹಿಸಿ ಬಂಧನದಲ್ಲಿ ಇಡಲಾಗಿದೆ.