Home Karavali Karnataka ಸನಾತನ ಸಂಸ್ಕಾರ ಶಿಬಿರ : 2.೦ಆಯೋಜನೆ, ಬರಹ -ಬಾಲಾಜಿ ವಿಷ್ಣು ಆಚಾರ್ಯ…!!

ಸನಾತನ ಸಂಸ್ಕಾರ ಶಿಬಿರ : 2.೦ಆಯೋಜನೆ, ಬರಹ -ಬಾಲಾಜಿ ವಿಷ್ಣು ಆಚಾರ್ಯ…!!

ಉಡುಪಿ : ಅಂತಿಂತೂ ಇಂದು ಎರಡನೇ ವರ್ಷದ ಶಿಬಿರದ ಕೊನೆ. ಕಳೆದ ವರ್ಷದ ಶಿಬಿರಾರ್ಥಿಗಳ ಪೋಷಕರು 2025ರಲ್ಲಿ ಅಲ್ಲಲ್ಲಿ ಸಿಕ್ಕಾಗ “ಈಸಲ ಯಾವಾಗ” ಎಂಬ ಪ್ರಶ್ನೆಯೇ ನನಗೆ ಬೂಸ್ಟರ್ ಆಗಿತ್ತು. ಮುಂದುವರಿದ ಭಾಗಕ್ಕಾಗಿ ತಂದೆ ಬಾಲಾಜಿ ರಾಘವೇಂದ್ರ ಆಚಾರ್ಯರಲ್ಲಿ ಚರ್ಚೆಮಾಡಿದಾಗ ಕಳೆದ ಬಾರಿಯಂತೆಯೇ ಮಕ್ಕಳಿಗೆ ಉಚಿತವಾಗಿ ಭಗವದ್ಗೀತೆ,ಭಜನೆ, ರಾಮಾಯಣ,ಯೋಗಾಸನ,ದೇಸಿ ಆಟಗಳು,ಜೀವನ ಮೌಲ್ಯ ಹಾಗೂ ಸೆಕ್ಯುಲರ್ ಶಿಕ್ಷಣದ ಹೆಸರಿನಲ್ಲಿ ಮರೆಮಾಚುತ್ತಿರುವ ಭಾರತ ಕಹಿ ಇತಿಹಾಸ ಮತ್ತು ಕಟು ವಾಸ್ತವಗಳ advanced studyಯ ಪೂರ್ಣ ರೂಪುರೇಷೆ ಕೊಟ್ಟರು. ಅಪಸ್ವರಗಳು ಬಂದಲ್ಲಿ ಆಧಾರ ಸಹಿತವಾಗಿ ಬಾಯಿ ಮುಚ್ಚಿಸು ಎಂದ ಅಮ್ಮ, ಸಂಬಂಧಪಟ್ಟ ಐತಿಹಾಸಿಕ ಪುಸ್ತಕಗಳನ್ನು ಕೊಟ್ಟರು. “ಇಂತಹ ಶಿಬಿರ ನಮ್ಮಲ್ಲೇ ಮುಂದುವರಿಸಿ” ಎಂಬ ಸೋದೆಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಅನುಗ್ರಹದ ಮಾತಿನಂತೆಯೇ,ಅದೇ ಜಾಗದಲ್ಲಿ 60 ಮಕ್ಕಳ,12 ದಿನಗಳ ಈ ಶಿಬಿರಕ್ಕೆ ಸೋದೆಮಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ರತ್ನಕುಮಾರ್ ದೀಪ ಹಚ್ಚಿ ಮಂಗಳ ಕೋರಿದರು.

ವಿಶ್ವಗುರುವಾಗಿದ್ದ ಭಾರತದ ಮೇಲೆ ಜಿಹಾದಿ ಯುದ್ಧ, ಕ್ರೈಸ್ತ ಮಿಷನರಿಗಳ ಮತಾಂತರ, ಸೆಕ್ಯುಲರ್ ಶಿಕ್ಷಣ ಮರೆಮಾಚಿದ ಸ್ವಾತಂತ್ರ್ಯ ಸಂಗ್ರಾಮದ ಭಾಗ, ವಿಭಜನೆಯ ಕರಾಳ ಮುಖ,ತುಷ್ಟೀಕರಣ,ಪೆಹಲ್ಗಾಮ್ ಹಿನ್ನಲೆಯಲ್ಲಿ ಭಗವದ್ಗೀತೆಯ ಅಹಿಂಸೆ ಮತ್ತು ಗಾಂಧೀಜಿಯ ಪೊಳ್ಳು ಅಹಿಂಸೆಯ ಪ್ರಸ್ತುತತೆ, ಮಥುರಾ,ಕಾಶಿಯ ವಿಷಯಗಳು,ಕ್ಲಾಸ್ನಲ್ಲಿ ಹೇಳಿದಾಗ pindrop silence, ಮುಗ್ಧಮುಖಗಳಲ್ಲಿ ಆಘಾತ ಮಿಶ್ರಿತ ನೋವು.

“ಹಳೆ ಘಟನೆಗಳು ಈಗ ಯಾಕೆ?”, “ಅಷ್ಟು ಕಠೋರ ಸತ್ಯ ಮುಗ್ಧ ಮಕ್ಕಳಿಗೆ ಯಾಕೆ?” ಎಂಬ ಪ್ರಶ್ನಾರೂಪದಲ್ಲಿ ಅಡಗಿದ್ದ ಕೆಲವು ಅಪಸ್ವರಗಳೂ ಬಂದದ್ದಿದೆ. ಭೂತ, ವರ್ತಮಾನಗಳ ಪರಿಜ್ಞಾನವೇ ಭವಿಷ್ಯದ ದಿಕ್ಕು ತೋರಿಸುತ್ತದೆ ಎಂಬ common sense ಇಲ್ಲದ ಮೂರ್ಖರಂತೂ ಆ ಪ್ರಶ್ನೆ ಕೇಳಿದವರಲ್ಲ. ಎಲ್ಲಾ ತಾಯಂದಿರೂ ಮುಗ್ಧ ಮಕ್ಕಳಿಗೆ ಕಹಿ ಸತ್ಯಗಳನ್ನು ಹೇಳದೇ ಮುಚ್ಚಿಟ್ಟಿದ್ದರೆ ವೀರ ಶಿವಾಜಿಯಂತಹ ಹೆಸರು ನಮಗಿಂದು ತಿಳಿಯುತ್ತಿರಲಿಲ್ಲ. ನ್ಯಾಯಕ್ಕಾಗಿ ಪ್ರತೀಕಾರದ ಈ ಪರಿಸ್ಥಿತಿಯಲ್ಲಿ ದೇಶವಿರುವಾಗ ಶಾಂತಿ ಮಂತ್ರ ಪಠಿಸಿ ದಿಕ್ಕು ತಪ್ಪಿಸುವ ಸ್ಲೀಪರ್ ಸೆಲ್ ಗಳ ಬಾಯಿ ಮುಚ್ಚಿಸಲು ಮಕ್ಕಳೇ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗುವ ದಿಶೆಯಲ್ಲಿ ನಮ್ಮ ಪ್ರಯತ್ನ. ಮಕ್ಕಳು ಕೇಳಿದ relevant ಪ್ರಶ್ನೆಗಳು ಮತ್ತು ಉತ್ತರ ಸಿಕ್ಕಿದ ನಂತರದ ತೃಪ್ತಿಯ ಮುಖವೇ ನಮ್ಮ ಪ್ರಯತ್ನಕ್ಕೆ ಸಿಕ್ಕ ಫಲ.

ಇಂದು ಕೊನೆ. ಸಮಾರೋಪದ ಸಣ್ಣ ಸಭೆಗೆ ಹೆಮ್ಮೆಯ ಸನಾತನಿ,ಖ್ಯಾತ ಉದ್ಯಮಿ ಅಜಯ್ ಶೆಟ್ಟಿ ಮತ್ತು ಎಲ್ಲ ಪೋಷಕರು ಬಂದದ್ದು ಸಂತಸವಾಗಿದೆ. ಧರ್ಮದ ಈ ರಥವನ್ನು ಎಳೆದವರಲ್ಲಿ ನಾನೂ ಒಬ್ಬ ಎಂಬ ವಿನಮ್ರ ಭಾವವಿದೆ. ನನ್ನೊಂದಿಗೆ ನಿಂತು ಪ್ರತಿದಿನ feedback ನೀಡಿದ ಪತ್ನಿ. ತಾನು ವಿಧ್ಯಾರ್ಥಿಯಾಗಿಯೂ ಮಕ್ಕಳಿಗೆ ಗೀತೆ,ರಾಮಾಯಣ ಕಲಿಸಿದ ಗುರುರಾಜ್ ಭಟ್, ನಗರ ಸಂಘಚಾಲಕರಾದ ಮಟ್ಟು ಲಕ್ಷ್ಮೀನಾರಾಯಣ್ ರಾವ್ ,ನಿಶುಲ್ಕವಾಗಿ ಬಂದು ಮಕ್ಕಳಿಗೆ ಯೋಗ,ದೇಸಿ ಆಟ ಆಡಿಸಿದ RSS ನ ಸೂರಜ್ ಮತ್ತು ರಕ್ಷಿತ್, ನಮ್ಮ ಸಂಸ್ಥೆಯ ಸಿಬ್ಬಂದಿ ವಿನುತಾ,ಶಾಲೆಯ ಆಡಳಿತಾಧಿಕಾರಿ ಪ್ರಭಾವತಿ ಅಡಿಗ,HM ಪೂರ್ಣಿಮಾ,ಶಾಲೆಯ ಸಿಬ್ಬಂದಿ ವರ್ಗ, ಈ ಶಿಬಿರಕ್ಕೆ ಮಕ್ಕಳನ್ನು ಕಳಿಸಿ ನಮ್ಮನ್ನು ಉತ್ತೇಜಿಸಿದ ಪೋಷಕರು, ಮುಖ್ಯವಾಗಿ ಮಕ್ಕಳು ಸೇರಿ ಈ ರಥೋತ್ಸವ ವಿಜೃಂಭಣೆಯಿಂದ ಜರುಗಿದೆ. ದೇಶದ ಗಲ್ಲಿಗಲ್ಲಿಗಳಲ್ಲಿಲೂ ಇನ್ನೂ ಹೆಚ್ಚಿನ ಧರ್ಮಪ್ರಜ್ಞೆ ಮೂಡಿಸುವ ಇಂತಹ ಉತ್ಸವಗಳು ನಡೆಯಲಿ ಎಂದು ಪ್ರಾರ್ಥಿಸಿ.