ಮಣಿಪಾಲ: ಉಡುಪಿ ನಗರದ ಮಣಿಪಾಲ ಅಪಾರ್ಟ್‌ಮೆಂಟ್ ವೊಂದರ ಮನೆಯಲ್ಲಿ ಕಬ್ಬಿಣದ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣವನ್ನು ಕಳ್ಳರು ಕಳ್ಳತನ ನಡೆಸಿದ ಘಟನೆ ನಡೆದಿದೆ.
ನಿರ್ಮಲ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆ ವಿವರ : ಪಿರ್ಯಾದಿದಾರರಾದ ನಿರ್ಮಲ (72), ಶಿವಳ್ಳಿ ಗ್ರಾಮ ಉಡುಪಿ ಇವರು ದಿನಾಂಕ 28/02/2025 ರಂದು ಸಂಜೆ 04:00 ಗಂಟೆಗೆ ಪ್ರಿನ್ಸಸ್ ಅಪಾರ್ಟ್‌ಮೆಂಟ್ ನಲ್ಲಿ ಚಿನ್ನಾಭರಣ ಹಾಗೂ ಮಗಳು ಮತ್ತು ಮೊಮ್ಮಗಳ ಚಿನ್ನಾಭರಣ ವನ್ನು ಅವರ ಮನೆಯ ಕಬ್ಬಿಣದ ಬೀರುವಿನಲ್ಲಿ ಬೀಗ ಹಾಕಿ ಇಟ್ಟು ಕುಂದಾಪುರ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಪಿರ್ಯಾದಿದಾರರ ಮಗನ ಮನೆ ಉಡುಪಿಗೆ ಹೋಗಿದ್ದು ದಿನಾಂಕ 11/04/2025 ರಂದು ಮದ್ಯಾಹ್ನ 02:30 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಕಬ್ಬಿಣದ ಬೀರುವಿನಲ್ಲಿ ಇಟ್ಟಿದ್ದ ಅಂದಾಜು 9,00,000/-ರೂ ಮೌಲ್ಯದ ಒಟ್ಟು 142 ಗ್ರಾಂ ಚಿನ್ನಾಭರಣವನ್ನು 28/02/2025 ರಂದು ಸಂಜೆ:04:00 ಗಂಟೆಯಿಂದ ದಿನಾಂಕ 11/04/2025 ರಂದು ಮದ್ಯಾಹ್ನ 02:30 ಗಂಟೆಯ ನಡುವೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2025 ಕಲಂ: 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.