ಸುಳ್ಯ, ಅ.16: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಳ್ಯ ಪೊಲೀಸ್ ಠಾಣೆಯ ಪಿಎಸ್ಐ ಉದಯರವಿ ಎಂ.ವೈ ಅವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪು KA-19-G-0817 ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಂಜೆ 5:45ಕ್ಕೆ ಸುಳ್ಯ ತಾಲೂಕು ಪಂಚಾಯತ್ ಕಚೇರಿ ಕಡೆಗೆ ಬರುವಾಗ ವಿವೇಕಾನಂದ ವೃತ್ತದ ಬಳಿ ಅಕ್ರಮ ಲಾಟರಿ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಬಂದಿದೆ.
ಸ್ಥಳಕ್ಕೆ ತಲುಪಿದಾಗ ಇಲಾಖಾ ಜೀಪು ಕಂಡು ಓಡಿಹೋದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ವಿಚಾರಿಸಿದಾಗ ಆತ ಸುಳ್ಯ ಕಸಬ ಗ್ರಾಮದ ವೆಲೈಂಟಿನ್ ರೋಡ್ರಿಗಸ್ ಎಂದು ತಿಳಿದುಬಂದಿದೆ.
ಆತನ ಜೇಬು ಪರಿಶೀಲಿಸಿದಾಗ ಅ.15 ರಂದು ಡ್ರಾ ಆಗುವ 17 ಲಾಟರಿ ಟಿಕೆಟ್ಗಳು,ಅ.16 ರಂದು ಡ್ರಾ ಆಗುವ 11 ಲಾಟರಿ ಟಿಕೆಟ್ಗಳು ಒಟ್ಟು 2 ಕಟ್ಟು ಕೇರಳ ಲಾಟರಿ ಟಿಕೆಟ್ಗಳು ಪತ್ತೆಯಾಗಿವೆ. ಜೊತೆಗೆ ಲಾಟರಿ ಮಾರಿ ಬಂದ 5,100 ರೂ ನಗದು ಹಣವನ್ನು ಪಂಚರ ಸಮಕ್ಷಮ ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 148/2026 ಕಲಂ 7(iii) Lottery Regulation Act 1998 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.




