Home Latest ಉಡುಪಿ: ಕಕ್ಕುಂಜೆಯಲ್ಲಿ 35ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಶಾರದಾ ಪೂಜೆ…!!

ಉಡುಪಿ: ಕಕ್ಕುಂಜೆಯಲ್ಲಿ 35ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಶಾರದಾ ಪೂಜೆ…!!

ಉಡುಪಿ, ಅಕ್ಟೋಬರ್ 10: ಸ್ವರ್ಣ ಯುವಕ ಮಂಡಲ (ರಿ.), ಕಕ್ಕುಂಜೆ ಪಡುಪೆರಂಪಳ್ಳಿ, ಶಿವಳ್ಳಿ, ಉಡುಪಿ ಇದರ ವತಿಯಿಂದ 35ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಶಾರದಾ ಪೂಜೆ ಆಯೋಜಿಸಲಾಗಿದೆ.

ಅಕ್ಟೋಬರ್ 11ರಂದು ಕಕ್ಕುಂಜೆ ಶಾಲಾ ವಠಾರದಲ್ಲಿ ಸಂಜೆ 3 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಐಸಿರಿ ಗ್ರೂಪ್ ಮತ್ತು ಶ್ರೀ ರಾಮಾಂಜನೇಯ ಭಜನಾ ಮಂಡಳಿ ಅಂಬಲಪಾಡಿ ಇವರ ಭಜನಾ ಕಾರ್ಯಕ್ರಮದೊಂದಿಗೆ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.

ಭಕ್ತಾಭಿಮಾನಿಗಳು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಯುವಕ ಮಂಡಲದ ಅಧ್ಯಕ್ಷ ಕಿರಣ್ ಶೆಟ್ಟಿ ಅವರು ವಿನಂತಿಸಿದ್ದಾರೆ.