Home Latest ಉಡುಪಿ ಶ್ರೀ ಕೃಷ್ಣಮಠದಲ್ಲಿ ಪಂಚಕಜ್ಜಾಯ ತಯಾರಿಕೆಗೆ ನೂತನ ಯಂತ್ರಗಳ ಉದ್ಘಾಟನೆ…!!

ಉಡುಪಿ ಶ್ರೀ ಕೃಷ್ಣಮಠದಲ್ಲಿ ಪಂಚಕಜ್ಜಾಯ ತಯಾರಿಕೆಗೆ ನೂತನ ಯಂತ್ರಗಳ ಉದ್ಘಾಟನೆ…!!

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಮುಖ್ಯಪ್ರಾಣ ದೇವರ ಪ್ರತಿನಿತ್ಯ ನಡೆಯುವ ರಂಗಪೂಜೆಗೆ ಬಳಸುವ ಪಂಚಕಜ್ಜಯ ತಯಾರಿಕೆಯನ್ನು ಇನ್ನಷ್ಟು ಸುಲಭ ಹಾಗೂ ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಕಡಲೆಯನ್ನು ಹುರಿಯುವ ನೂತನ ಯಂತ್ರ ಹಾಗೂ ಪಂಚಕಜ್ಜಯಕ್ಕೆ ಅಗತ್ಯವಾದ ಹುಡಿ ಮಾಡುವ ನೂತನ ಯಂತ್ರವನ್ನು ಅಳವಡಿಸಲಾಗಿದೆ.

ಈ ನೂತನ ಯಂತ್ರಗಳನ್ನು ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶ್ರೀಪಾದರು, ದೇವರ ನಿತ್ಯಸೇವೆಯಲ್ಲಿ ಬಳಸುವ ನೈವೇದ್ಯದ ತಯಾರಿಕೆ ಶುಚಿತ್ವ, ಗುಣಮಟ್ಟ ಹಾಗೂ ಸಮಯಪಾಲನೆಯೊಂದಿಗೆ ನಡೆಯುವುದು ಅತ್ಯಂತ ಮುಖ್ಯವಾಗಿದ್ದು, ಈ ನೂತನ ಯಂತ್ರಗಳಿಂದ ಪಂಚಕಜ್ಜಯ ತಯಾರಿಕೆ ಮತ್ತಷ್ಟು ಸುಗಮ ಮತ್ತು ಪರಿಣಾಮಕಾರಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಠದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.