Home Crime ಕಾರ್ಕಳ: ಲಾರಿಗೆ ಬೈಕ್ ಡಿಕ್ಕಿ : 25 ವರ್ಷದ ಯುವಕ ಮೃತ್ಯು…!!

ಕಾರ್ಕಳ: ಲಾರಿಗೆ ಬೈಕ್ ಡಿಕ್ಕಿ : 25 ವರ್ಷದ ಯುವಕ ಮೃತ್ಯು…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ ಪಡುತಿರುಪತಿ ಪೆಟ್ರೋಲ್ ಪಂಪ್ ಬಳಿ ರಾಜ್ಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 25 ವರ್ಷದ ಯುವಕ ಮೃತಪಟ್ಟಿದ್ದಾರೆ.

ಮೃತರನ್ನು ವಿಘ್ನೇಶ ಆಚಾರ್ಯ (25) ಎಂದು ತಿಳಿಯಲಾಗಿದೆ.

ಅಕ್ಟೋಬರ್ 4ರಂದು ಸಂಜೆ 6:20ರ ಸುಮಾರಿಗೆ ವಿಘ್ನೇಶ ಆಚಾರ್ಯ ಅವರು ನೋಂದಣಿ ಸಂಖ್ಯೆ ಇಲ್ಲದ ಹೊಸ ಹೋಂಡಾ ಮೋಟಾರ್ ಸೈಕಲ್‌ನಲ್ಲಿ ನಿಟ್ಟೆ ಕಡೆಯಿಂದ ಪುಲ್ಕೇರಿ ಕಡೆಗೆ ತೆರಳುತ್ತಿದ್ದರು.

ಈ ವೇಳೆ ಬೈಕ್ ಅನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ, ನಿಟ್ಟೆಯಿಂದ ಪುಲ್ಕೇರಿ ಕಡೆಗೆ ತೆರಳುತ್ತಿದ್ದ ವಸಂತ ಸೇರಿಗಾರ ಅವರು ಚಲಾಯಿಸುತ್ತಿದ್ದ KA-20-D-3666 ನೋಂದಣಿ ಸಂಖ್ಯೆಯ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ.

ಅಪಘಾತದಲ್ಲಿ ವಿಘ್ನೇಶ ಆಚಾರ್ಯ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 7:06ಕ್ಕೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.