ಉಡುಪಿ: ನಗರದಿಂದ ತೊಟ್ಟಂ-ಹೂಡೆ-ಮಲ್ಪೆ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಸಿಟಿಬಸ್ ವೊಂದರ ವಿರುದ್ಧ ಗಂಭೀರ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿದ್ದು ಅಧಿಕಾರಿಗಳು ಬಸ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಆರ್‌ಟಿಒ ದಾಖಲೆಗಳ ಪ್ರಕಾರ:
ಬಸ್ 1 ಏಪ್ರಿಲ್ 2011 ರಂದು ನೋಂದಣಿಯಾಗಿದ್ದು, 15 ವರ್ಷಕ್ಕೂ ಹಳೆಯದಾಗಿದೆ.
ಫಿಟ್ನೆಸ್ ಪ್ರಮಾಣಪತ್ರದ ಅವಧಿ 27 ಮೇ 2025 ರಂದೇ ಮುಕ್ತಾಯಗೊಂಡಿದೆ.
ಮೋಟಾರು ವಾಹನ ತೆರಿಗೆ 30 ಜೂನ್ 2024 ರಂದೇ ಬಾಕಿ* ಉಳಿದಿದೆ.
ಪರವಾನಗಿ (Permit) ಅವಧಿ 28 ಫೆಬ್ರವರಿ 1998 ರಲ್ಲೇ ಮುಕ್ತಾಯ ಎಂದು ದಾಖಲೆಯಲ್ಲಿ ತೋರಿಸುತ್ತಿದೆ ಆರ್‌ಟಿಒ ದಾಖಲೆಯಲ್ಲೇ ವಾಹನದ ಸ್ಥಿತಿಯನ್ನು “Fitness Expired” ಮತ್ತು 24 ನವೆಂಬರ್ 2025 ರಿಂದ ಉಡುಪಿ ಆರ್‌ಟಿಒ ಲಾಕ್ ಮಾಡಿದೆ ಎಂದು ನಮೂದಿಸಲಾಗಿದೆ.
ವಿಮೆ ಮಾತ್ರ 23 ನವೆಂಬರ್ 2026 ರವರೆಗೆ ಮತ್ತು PUCC 23 ಮಾರ್ಚ್ 2027 ರವರೆಗೆ ಮಾನ್ಯವಿದೆ.
ಆರ್‌ಟಿಒ ಲಾಕ್ ಮಾಡಿದ ವಾಹನ ಮತ್ತೆ ರಸ್ತೆಗೆ.?:
ಫಿಟ್ನೆಸ್ ಇಲ್ಲದೆ, ತೆರಿಗೆ ಬಾಕಿ ಇದ್ದು, ಆರ್‌ಟಿಒ ಲಾಕ್ ಮಾಡಿರುವ ವಾಹನವು ಸಾರ್ವಜನಿಕ ಸೇವೆಯಲ್ಲಿ ಹೇಗೆ ಸಂಚರಿಸುತ್ತಿದೆ ಎಂಬ ಪ್ರಶ್ನೆ ಎದ್ದಿದೆ.
ಇದರ ಜೊತೆಗೆ ಬಸ್ ಮುಟ್ಟುಗೋಲು ಹಾಕಿದ ಮರುದಿನವೇ ಮತ್ತೆ ಪ್ರಯಾಣಿಕರ ಸೇವೆಗೆ ಇಳಿದಿತ್ತು ಎಂಬ ಆರೋಪವೂ ಕೇಳಿಬಂದಿದೆ. ಕಳೆದ ಎರಡು ವರ್ಷಗಳಿಂದ ತೆರಿಗೆ ಪಾವತಿಸದೇ ಸಂಚರಿಸುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.



