Home Crime ಮಲ್ಪೆ: ಮೀನುಗಾರಿಕಾ ಬೋಟ್‌ನಿಂದ ಸಮುದ್ರಕ್ಕೆ ಬಿದ್ದು ಕಾರ್ಮಿಕ ನಾಪತ್ತೆ…!!

ಮಲ್ಪೆ: ಮೀನುಗಾರಿಕಾ ಬೋಟ್‌ನಿಂದ ಸಮುದ್ರಕ್ಕೆ ಬಿದ್ದು ಕಾರ್ಮಿಕ ನಾಪತ್ತೆ…!!

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಿಂದ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕಾರ್ಮಿಕನೊಬ್ಬ ಕಣ್ಮರೆಯಾಗಿರುವ ಘಟನೆ ಮಲ್ಪೆ ಕಡಲಿನಲ್ಲಿ ನಡೆದಿದೆ.

ದಿನಾಂಕ 08.09.2026 ರಂದು ಸಂಜೆ 05:00 ಗಂಟೆಗೆ ಜಯಗಣೇಶ ಬೋಟ್ ಮಲ್ಪೆಯಿಂದ ಕಾಪು ಕಡೆಗೆ ಮೀನುಗಾರಿಕೆಗೆ ಹೊರಟಿತ್ತು. ರಾತ್ರಿ ಸುಮಾರು 08:30 ಗಂಟೆಗೆ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸಕ್ಕೆ ತೆರಳಿದ್ದ ಕೊಪ್ಪಳ ಜಿಲ್ಲೆಯ ಅಶೋಕ (42) ರವರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದಾರೆ.

ಕೂಡಲೇ ಬೋಟ್‌ನಲ್ಲಿದ್ದವರು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103/2026, ಮನುಷ್ಯ ಕಾಣೆ ಎಂದು ಪ್ರಕರಣ ದಾಖಲಿಸಲಾಗಿದೆ. ಮೀನುಗಾರಿಕೆ ಇಲಾಖೆ ಮತ್ತು ಕರಾವಳಿ ಕಾವಲು ಪಡೆಯ ಸಹಕಾರದೊಂದಿಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.