ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಕೆಲಸಕ್ಕೆಂದು ಮನೆಯಿಂದ ಹೋರಗೆ ಹೋದವರು ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ಸಂಭವಿಸಿದೆ.
ನಾಪತ್ತೆಯಾದ ಮಹಿಳೆ ವಿನಯ ಕುಮಾರಿ ಎಂದು ತಿಳಿಯಲಾಗಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದುದಾರ ವೀಣಾ ಕುಮಾರಿ,(27) ತಂದೆ: ದಿ. ರವಿರಾಜ್ ವಾಸ: ಮನೆ ನಂಬ್ರ: 6-111, ಕೆಳನೇಜಾರ್ ಕಲ್ಯಾಣ್‌ಪುರ ಅಂಚೆ,ಮೂಡುತೋನ್ಸೆ ಗ್ರಾಮ ಇವರ ಅಕ್ಕನಾದ ವಿನಯ ಕುಮಾರಿ (31) ಇವರು ತಮ್ಮ ಮನೆಯಾದ ಉಡುಪಿ ತಾಲೂಕು ಮೂಡುತೋನ್ಸೆ ಗ್ರಾಮದ ಕೆಳನೇಜಾರಿನಲ್ಲಿರುವ ಪಿರ್ಯಾದುದಾರರ ವಾಸ್ತವ್ಯದ ಮನೆಯಿಂದ ದಿನಾಂಕ 13-02-2026 ರಂದು ಬೆಳಿಗ್ಗೆ ಸುಮಾರು 08:15 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೋದವರು, ಈವರೆಗೂ ಮನೆಗೆ ವಾಪಾಸು ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆ ಅಪರಾಧ ಕ್ರಮಾಂಕ:18/2026 ಕಲಂ:ಹೆಂಗಸು ಕಾಣೆ ರಂತೆ ಪ್ರಕರಣ ದಾಖಲಾಗಿರುತ್ತದೆ.
