ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕ ಸತೀಶ ಎಂದು ತಿಳಿದು ಬಂದಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದುದಾರ ನೀಲು (45) ತಂದೆ:ವಾಸು ದೇವಾಡಿಗ ವಾಸ:ಹಕ್ಲ ಮನೆ ಮಕ್ಕಿ ದೇವಸ್ಥಾನದ ಬಳಿ ಬಿಜೂರು ಗ್ರಾಮ, ಇವರ ತಮ್ಮನಾದ ಸತೀಶ 35 ವರ್ಷ ರವರು ವೀಪರಿತ ಮದ್ಯಪಾನ ಮಾಡುವ ಹಾಗೂ ಗುಟಕಾ ಪಾನ ಮಸಾಲಾ ಜಿಗಿಯುವ ವ್ಯಸಿನಿಯಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದವರು ಕಳೆದ 15 ದಿನದಿಂದ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಂಡು ಅನ್ನ ಆಹಾರ ಸೇವಿಸಲು ಆಗದೇ ಇದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ: 14/02/2026 ರಂದು ಸಂಜೆ 4:00 ಗಂಟೆಯಿಂದ 4:45 ಗಂಟೆಗೆ ಮದ್ಯದವಧಿಯಲ್ಲಿ ಬೀಜೂರು ಗ್ರಾಮದ ಹಕ್ಲುಮನೆ ಎಂಬಲ್ಲಿರುವ ಮೃತರ ಕುಂಟುಂಬದವರಿಗೆ ಸೇರಿದ ಹಾಡಿಯಲ್ಲಿರುವ ನೇರಳೆ ಮರದ ಕೊಂಬೆಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಯುಡಿಆರ್‌ಕ್ರಮಾಂಕ: 11/2026,ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.



