Home Crime ಕುಂದಾಪುರ: ಅಂಗವಿಕಲ ಮಹಿಳೆ ಆತ್ಮಹತ್ಯೆ…!!

ಕುಂದಾಪುರ: ಅಂಗವಿಕಲ ಮಹಿಳೆ ಆತ್ಮಹತ್ಯೆ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ದೇವಲ್ಕುಂದ ಗ್ರಾಮದ ನಿವಾಸಿ ಮಂಜಿ (61) ಎಂಬವರು ಮಧ್ಯಾಹ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಮಂಜಿ ಅವರು ಎರಡೂ ಕಾಲು ಪೋಲಿಯೋ ಪೀಡಿತ ಅಂಗವಿಕಲರಾಗಿದ್ದು, 2 ವರ್ಷಗಳಿಂದ ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದು ಮಣಿಪಾಲ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮಧ್ಯಾಹ್ನ 3:30 ರಿಂದ 4:10 ರ ನಡುವೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ಪಕ್ಕದ ಮನೆಯವರು ನೋಡಿ ತಂಗಿ ಸಹನಾ (49) ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರನ್ನು ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಂಜೆ 4:35 ಕ್ಕೆ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ UDR ಕ್ರಮಾಂಕ 32/2026, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ.