Home Crime ಉಳ್ಳಾಲ: ಅಮಲು ಪದಾರ್ಥ ಸೇವನೆ ಮಾಡಿದ್ದ ಇಬ್ಬರು ಯುವಕರು ಪೊಲೀಸರ ವಶಕ್ಕೆ…!!

ಉಳ್ಳಾಲ: ಅಮಲು ಪದಾರ್ಥ ಸೇವನೆ ಮಾಡಿದ್ದ ಇಬ್ಬರು ಯುವಕರು ಪೊಲೀಸರ ವಶಕ್ಕೆ…!!

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಬಾಳೆಪುಣಿ ಪಂಚಾಯತ್ ಮೈದಾನದ ಬಳಿ ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ ಇಬ್ಬರು ಯುವಕರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಿನಾಂಕ 03-11-2026 ರಂದು ಕೊಣಾಜೆ ಪೊಲೀಸ್ ಠಾಣೆಯ PSI ನಾಗರಾಜ್ ಎಸ್. ಅವರು ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಮಧ್ಯಾಹ್ನ 12 ಗಂಟೆಗೆ ಉಳ್ಳಾಲ ತಾಲೂಕು ಬಾಳೆಪುಣಿ ಗ್ರಾಮದ ಬಾಳೆಪುಣಿ ಪಂಚಾಯತ್ ಮೈದಾನದ ಬಳಿ ಇಬ್ಬರು ಯುವಕರು ಅಮಲು ಪದಾರ್ಥ ಸೇವಿಸಿ ನಶೆಯಲ್ಲಿರುವಂತೆ ಕಂಡುಬಂದಿದ್ದಾರೆ.

ಪೊಲೀಸರು ವಿಚಾರಿಸಿದಾಗ ಯುವಕರು ಮಹಮ್ಮದ್ ಮುಸ್ತಾಫ (30), ತಂದೆ ಇಸ್ಮಾಯಿಲ್, ಇರಾ ಗ್ರಾಮದ ಪರಪ್ಪು ಸೈಟ್ ನಿವಾಸಿ ಹಾಗೂ ಮೊಹಮ್ಮದ್ ಅಫೀಝ್ (26), ತಂದೆ ದಿ. ಅಬ್ದುಲ್ ರಜಾಕ್, ಇರಾ ಗ್ರಾಮದ ಪರಪ್ಪು ಸೈಟ್ ನಿವಾಸಿ ಎಂದು ತಿಳಿದುಬಂದಿದೆ.

ಮುಂದಿನ ಕಾನೂನು ಕ್ರಮಕ್ಕಾಗಿ ಇಬ್ಬರನ್ನು ಮಧ್ಯಾಹ್ನ 12.10 ಗಂಟೆಗೆ ವಶಕ್ಕೆ ಪಡೆದು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರೂ ಯುವಕರು AMPHETAMINES ಎಂಬ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.