Home Crime ಕಾರ್ಕಳ: ಕೋಳಿ ಅಂಕ ಜೂಜಾಟ ಅಡ್ಡೆಗೆ ಪೊಲೀಸರ ದಾಳಿ : 5 ಮಂದಿ ವಶಕ್ಕೆ…!!

ಕಾರ್ಕಳ: ಕೋಳಿ ಅಂಕ ಜೂಜಾಟ ಅಡ್ಡೆಗೆ ಪೊಲೀಸರ ದಾಳಿ : 5 ಮಂದಿ ವಶಕ್ಕೆ…!!

ಕಾರ್ಕಳ: ಅಕ್ರಮ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಅಡ್ಡೆಗೆ ಕಾರ್ಕಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 5 ಮಂದಿಯನ್ನು ವಶಕ್ಕೆ ಪಡೆದ ಘಟನೆ ಇರ್ವತ್ತೂರು ಗ್ರಾಮದಲ್ಲಿ ನಡೆದಿದೆ.

ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್ಐ (ತನಿಖೆ) ನವೀನ್ ಪಿ ಬೋರ್ಕರ್ ಅವರಿಗೆ ಸಂಜೆ 4 ಗಂಟೆಗೆ, ಇರ್ವತ್ತೂರು ಗ್ರಾಮದ ಕೆಂಪುಗುಡ್ಡೆ ಎಂಬ ಸಾರ್ವಜನಿಕ ಸ್ಥಳದಲ್ಲಿ ಹುಂಜ ಕೋಳಿಗಳ ಕಾಲಿಗೆ ಬಾಳುಕತ್ತಿ ಕಟ್ಟಿ, ಹಣವನ್ನು ಪಣವಾಗಿಟ್ಟು ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು.

ಮಾಹಿತಿ ಮೇರೆಗೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 5 ಗಂಟೆಗೆ ದಾಳಿ ನಡೆಸಿದ ಪೊಲೀಸರು, ಜೂಜಾಟಕ್ಕೆ ಬಳಸಿದ ಹುಂಜ ಕೋಳಿ-1, ನಗದು ರೂ. 1600/-, ಬಾಳು ಕತ್ತಿ-2, ಹಗ್ಗಗಳು ವಶಪಡಿಸಿಕೊಂಡಿದ್ದಾರೆ.

ವಶಕ್ಕೆ ಪಡೆದ ಆರೋಪಿಗಳು:ಸುನಿಲ್ ಡಿ ಸೋಜಾ (39), ಮಿಯ್ಯಾರು,ಹರೀಶ್ ಭಂಡಾರಿ (54), ಮಿಯ್ಯಾರು,ಶ್ರೀನಿವಾಸ (38), ರೆಂಜಾಳ, ರಾಜೇಶ (31), ಮಾರ್ಪಾಡಿ, ಮಂಗಳೂರು,ಅರುಣ, ಇರ್ವತ್ತೂರು

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 79/2026, ಕಲಂ 87, 93 KP Act ಹಾಗೂ 11(1)(n) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರಂತೆ ಪ್ರಕರಣ ದಾಖಲಾಗಿದೆ.