ಉಡುಪಿ: ಸ್ವಚ್ಛತಾ ಹಿ ಸೇವಾ–2026ರ ಅಂಗವಾಗಿ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (MIC) ವಿದ್ಯಾರ್ಥಿಗಳಿಂದ ಬೀದಿ ನಾಟಕ (ನುಕ್ಕಡ್ ನಾಟಕ) ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಕಾರವಾರ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ (RRM) ಶ್ರೀಮತಿ ಆಶಾ ಶೆಟ್ಟಿ ಅವರು ಡಾ. ಸುಬ್ರಮಣ್ಯ ಭಟ್, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (MIC) ನಿರ್ದೇಶಕರಾದ ಡಾ. ಶುಭಾ, ಡಾ. ಕಾರ್ತಿಕೇಯ ಗೋಸ್ವಾಮಿ, ಸಹಾಯಕ ಪ್ರಾಧ್ಯಾಪಕರಾದ ಚಂದಕುಮಾರ್ ಹಾಗೂ MICಯ ಎಲ್ಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಡಾ. ಸುಬ್ರಮಣ್ಯ ಭಟ್ ಅವರು ಉಡುಪಿ ಜಿಲ್ಲೆಯ ಸಂಕ್ಷಿಪ್ತ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆಯ ಕುರಿತು ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿಗಳಿಂದ ಹುಲಿವೇಷ ನೃತ್ಯ ಪ್ರದರ್ಶನ ನಡೆಯಿತು.
‘ಸ್ವಚ್ಛತಾ ಹಿ ಸೇವಾ–2026 – ಸ್ವಚ್ಛ ಪ್ರವಾಸಿ ತಾಣಗಳು ಮತ್ತು ಪಾರಂಪರಿಕ ರೈಲ್ವೆ ತಾಣಗಳು’ ಹಾಗೂ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಈ ಬೀದಿ ನಾಟಕವನ್ನು ಇಂದು ಉಡುಪಿ, ಬೈಂದೂರು ಮೂಕಾಂಬಿಕಾ ರೋಡ್ ರೈಲು ನಿಲ್ದಾಣ ಹಾಗೂ ಮುರ್ಡೇಶ್ವರ ರೈಲು ನಿಲ್ದಾಣಗಳಲ್ಲಿ ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಕಾರವಾರ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಶ್ರೀಮತಿ ಆಶಾ ಶೆಟ್ಟಿ ಅವರು ವಂದನಾರ್ಪಣೆ ಸಲ್ಲಿಸಿದರು. ಕೆ. ಸುಧಾ ಕೃಷ್ಣಮೂರ್ತಿ ಎಂಪಿಆರ್/MAQ ತಿಳಿಸಿದ್ದಾರೆ.




