ಬಂಟ್ವಾಳ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 23 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ದೇವಸ್ಯಮೂಡೂರು ಗ್ರಾಮದ ಕೊಡೊಟ್ಟು ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಕಾವಳಮೂಡೂರು ಗ್ರಾಮದ ಕಾಂದ್ರೋಡಿ ನಿವಾಸಿ ತುಕ್ರಪ್ಪ ನಾಯ್ಕ ಅವರ ಪುತ್ರ ಯಶವಂತ (23) ಎಂದು ಗುರುತಿಸಲಾಗಿದೆ.
ಯಶವಂತ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, ಬಳಿಕ ಕೂಲಿ ಕೆಲಸ ಮಾಡಿಕೊಂಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಫರಂಗಿಪೇಟೆಯ ಮನಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ನಂತರ ಗುಣಮುಖರಾಗಿ ಬೆಂಗಳೂರಿಗೆ ಕೆಲಸಕ್ಕೆ ತೆರಳಿದ್ದ ಅವರು, ಕೆಲಕಾಲದ ಬಳಿಕ ಊರಿಗೆ ಮರಳಿದ್ದರು.
ಇತ್ತೀಚೆಗೆ ವಿದ್ಯಾಭ್ಯಾಸ ಮುಂದುವರಿಸುವುದಾಗಿ ತಿಳಿಸಿ ಮಾಣಿ ಬುಡೋಲಿಯಲ್ಲಿರುವ ಚಿಕ್ಕಮ್ಮ ಯಶೋಧ ಅವರ ಮನೆಯಲ್ಲಿ ವಾಸವಾಗಿದ್ದು, ಬಿ.ಸಿ.ರೋಡ್‌ನಲ್ಲಿ ಟ್ಯೂಷನ್‌ಗೆ ತೆರಳುತ್ತಿದ್ದರು.
ಸೆ.24ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1.15ರ ನಡುವಿನ ಅವಧಿಯಲ್ಲಿ ದೇವಸ್ಯಮೂಡೂರು ಗ್ರಾಮದ ಕೊಡೊಟ್ಟು ಎಂಬಲ್ಲಿರುವ ಸಂಬಂಧಿಕರ ಮನೆಯ ಬಾವಿಯ ನೀರು ತೆಗೆಯಲು ಅಳವಡಿಸಿದ್ದ ನೈಲಾನ್ ಹಗ್ಗವನ್ನು ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 22/2026, ಕಲಂ 194 BNSS 2023ರಂತೆ ಪ್ರಕರಣ ದಾಖಲಾಗಿದೆ.



