Home Crime ಮಣಿಪಾಲ: ಯುವಕ ನಾಪತ್ತೆ…!!

ಮಣಿಪಾಲ: ಯುವಕ ನಾಪತ್ತೆ…!!

ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷ್ಮೀಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ ವೇಟರ್ ಕೆಲಸ ಮಾಡಿಕೊಂಡಿದ್ದ ಮನೋಜ್ (20) ಎಂಬ ಯುವಕನು ಮೇ 18 ರಂದು ರಾತ್ರಿ 11 ರ ಸುಮಾರಿಗೆ ವಿಪರೀತ ಮದ್ಯಪಾನ ಮಾಡಿ, ಗಲಾಟೆ ಮಾಡುತ್ತಿದ್ದು, ಪೋಷಕರೊಂದಿಗೆ ಮನೆಗೆ ಹೋಗಲು ನಿರಾಕರಿಸಿ, ಓಡಿಹೋಗಿರುತ್ತಾನೆ. ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ, ಸ್ನೇಹಿತರನ್ನು ವಿಚಾರಿಸಿದರೂ ಇದುವರೆಗೂ ಪತ್ತೆಯಾಗಿರುವುದಿಲ್ಲ.

5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತುಳು, ಹಿಂದಿ ಹಾಗೂ ನೇಪಾಳಿ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕರು ಮೊ.ನಂ: 9480805448, ಪಿ.ಎಸ್.ಐ ಮೊ.ನಂ:9480805475, 8277988945 ಹಾಗೂ ಮಣಿಪಾಲ ಪೊಲೀಸ್ ಠಾಣೆ ದೂ.ಸಂಖ್ಯೆ : 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ..