ಕಾರ್ಕಳ: “ವೈದ್ಯೋ ನಾರಾಯಣೋ ಹರಿಃ ಎಂದರೆ ವೈದ್ಯರು ಸಾಕ್ಷಾತ್ ದೇವರಾದ ನಾರಾಯಣನ (ವಿಷ್ಣುವಿನ) ಸ್ವರೂಪ ಎಂದರ್ಥ ಹೀಗಿರುವಾಗ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ 5 ದಿನಗಳ ಹಿಂದೆ ಅಶೋಕ್ ಹೇಳುವ ವ್ಯಕ್ತಿ ತನ್ನದೇ ಸ್ವಾರ್ಥ ಮನಸಿನಲ್ಲಿ ಇಟ್ಟುಕೊಂಡು ದುರುದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸ್ತ್ರೀ ರೋಗ ತಜ್ಞರಿಗೆ ಕರ್ತವ್ಯಕ್ಕೆ ಅಡ್ಡಪಡಿಸಿದಲ್ಲದೇ OPD ಗೆ ಸಾರ್ವಜನಿಕರು ಬರುವುದು ನಿಷೇಧವಿದ್ದರೂ ಅಕ್ರಮ ಪ್ರವೇಶ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ನಡೆದಿದ್ದು ಒಂದು ಕ್ಷಣ ಸರಕಾರಿ ಆಸ್ಪತ್ರೆಯಲ್ಲಿ ಉದಿಗ್ನ ರೂಪ ಪಡೆದು ಕೊಂಡಿದ್ದು ಸುಳ್ಳಲ್ಲ.
ವೈದ್ಯರು ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದರು ಇನ್ನು ವ್ಯಕ್ತಿಯ ಮೇಲೆ ಯಾವುದೇ ಕ್ರಮ ಆಗದೇ ಇರೋದು ಸಾರ್ವಜನಿಕ ವಲಯದಲ್ಲಿ ಗೊಂದಲ ಏರ್ಪಟ್ಟಿದ್ದು, ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದು ಕೊಳ್ಳುವಂತೆ ಮಾಡಿದೆ ಹೀಗಿರುವಾಗ ದೂರನ್ನು ಪುನ್ಹ ಪರಿಶೀಲಿಸಿ ಅಪರಾಧಿಯಾದ ಅಶೋಕನ ಮೇಲೆ ಕಾನೂನು ಕ್ರಮ ಜರುಗಿಸಿ ಪೊಲೀಸ್ ಇಲಾಖೆಯ ಮೇಲಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಅಂತೆಯೇ ಸರಕಾರಿ ಆಸ್ಪತ್ರೆಯ ಗೌರವನ್ನು ಉಳಿಸಬೇಕು.
ಮುಂದಿನ ದಿನದಲ್ಲಿ ಕ್ರಮ ಜರುಗಿಸದೇ ಇದ್ದಲ್ಲಿ ಮಹಿಳಾ ಆಯೋಗದ ಮೆಟ್ಟಿಲೇರುತ್ತೆವೆ” ಎಂದು ಶ್ರೀಮತಿ ರಮಿತಾ ಸೂರ್ಯವಂಶಿಯವರು ಪತ್ರಿಕಾ ಮಧ್ಯಮಕ್ಕೆ ತಿಳಿಸಿರುತಾರೆ.




