Home Latest ₹75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಶೀಂಬ್ರ ದೇವಸ್ಥಾನದ ಸಂಪರ್ಕ ರಸ್ತೆ ಕಾಮಗಾರಿ ಉದ್ಘಾಟನೆ…!!

₹75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಶೀಂಬ್ರ ದೇವಸ್ಥಾನದ ಸಂಪರ್ಕ ರಸ್ತೆ ಕಾಮಗಾರಿ ಉದ್ಘಾಟನೆ…!!

ಉಡುಪಿ : ಮೂಡು ಪೆರಂಪಳ್ಳಿ ವಾರ್ಡಿನ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸುಮಾರು 75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಕಾಂಕ್ರೀಟ್ ರಸ್ತೆ ಕಾಮಗಾರಿಯ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಇತಿಹಾಸ ಪ್ರಸಿದ್ಧ ಶೀಂಬ್ರ ದೇವಸ್ಥಾನ ಉಡುಪಿಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದ್ದು, ಕೃಷ್ಣಂಗಾರಕ ಚತುರ್ದಶಿಯಂದು ದೇಶದ ವಿವಿಧ ಭಾಗಗಳಿಂದ ತೀರ್ಥ ಸ್ನಾನಕ್ಕೆ ಆಗಮಿಸುವ ಈ ಪುಣ್ಯ ಕ್ಷೇತ್ರಕ್ಕೆ ಉತ್ತಮ ಸಂಪರ್ಕ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಸುಮಾರು 75 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣಗೊಂಡಿದ್ದು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಗಣ್ಯರಾದ ಅಜಿತ್ ಪೈ, ರಮೇಶ್ ರಾವ್, ಬಾಲಾಜಿ ರಾಘವೇಂದ್ರ ಆಚಾರ್ಯ, ಯುವ ಬ್ರಾಹ್ಮಣ ಪರಿಷತ್ತಿನ ಶ್ರೀ ಚಂದ್ರಕಾಂತ ಕೆ.ಎನ್., ನಾಗರಾಜ ತಂತ್ರಿ, ಹರಿಕೃಷ್ಣ ಶಿವತ್ತಾಯ, ಪ್ರಶಾಂತ ಭಟ್ ಪೆರಂಪಳ್ಳಿ, ಅನಿಟ ಬೆಲಿಂಡಾ ಡಿಸೋಜಾ, ಮಂಜುನಾಥ ಮಣಿಪಾಲ, ಡೆನಿಸ್ ಮಸ್ಕರೇನ್ಹಸ್ , ಸುಮಾ, ವಿಜಯ ಪೂಜಾರಿ, ಶ್ರೀ ಗಣಪತಿ ಭಟ್, ಶ್ರೀ ವಾದಿರಾಜ ಆಚಾರ್ಯ, ಬಿಜೆಪಿ ಜಿಲ್ಲಾ ವಕ್ತಾರ ಶ್ರೀ ಮಧುಕರ ಮುದ್ರಾಡಿ, ಶಶಾಂಕ್ ಶಿವತ್ತಾಯ, ಗೋಪಾಲಾಚಾರ್ ಸೇರಿದಂತೆ ವಿದ್ವಾಂಸರು ಹಾಗೂ ಗಣ್ಯರು ಉಪಸ್ಥಿತರಿದ್ದರು.