Home Kundapura News ಉಡುಪಿ: ಶಾರ್ಜಾದಲ್ಲಿ ಕೊಲೆಯಾದ ಪ್ರಕಾಶ್ ಶವ ಇಂದು ಹುಟ್ಟೂರು ಕುಂದಾಪುರಕ್ಕೆ..!!

ಉಡುಪಿ: ಶಾರ್ಜಾದಲ್ಲಿ ಕೊಲೆಯಾದ ಪ್ರಕಾಶ್ ಶವ ಇಂದು ಹುಟ್ಟೂರು ಕುಂದಾಪುರಕ್ಕೆ..!!

ಕುಂದಾಪುರ: ಶಾರ್ಜಾದಲ್ಲಿ ನಿಗೂಢವಾಗಿ ಕೊಲೆಗೀಡಾಗಿರುವ ಕುಂದಾಪುರದ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್(50) ಅವರ ಶವ ಶಾರ್ಜಾದಿಂದ ಸೆ. 25 ರಂದು ಹುಟ್ಟೂರಿಗೆ ಬರಲಿದೆ.

ಗುರುವಾರ ರಾತ್ರಿ 11 ಗಂಟೆಗೆ ಶಾರ್ಜಾದಿಂದ ಪ್ರಕಾಶ್‌ ಅವರ ಸಂಬಂಧಿಕರು, ಕಂಪೆನಿಯವರು ವಿಮಾನದಲ್ಲಿ ಪಾರ್ಥಿವ ಶರೀರದೊಂದಿಗೆ ಹೊರಟಿದ್ದು, ಶುಕ್ರವಾರ ಬೆಳಗ್ಗಿನ ಜಾವ 4-5 ಗಂಟೆಯ ಸುಮಾರಿಗೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಕಳೆದ 14 ವರ್ಷಗಳಿಂದ ಶಾರ್ಜಾದಲ್ಲಿ ಸಿಮನ್ಸ್ ಕಂಪೆನಿಯ ಖಾಸಗಿ ವಿಮಾನ ಯಾನ ಸಂಸ್ಥೆಯ ಹಿರಿಯ ಮ್ಯಾನೇಜರ್ ಆಗಿದ್ದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹವು ಆ. 12 ರಂದು ಅಲ್ ಅಮಿನ್ ಎಂಬ ರಸ್ತೆಯ ಪಾರ್ಕಿಂಗ್ ಪ್ರದೇಶದಲ್ಲಿ ಅವರದೇ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಅವರ ಪತ್ನಿ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.