Home Latest ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಮಣಿಪಾಲದ ಅಧ್ಯಕ್ಷರಾಗಿ ಹರೀಶ್ ಜಿ ಕಲ್ಮಾಡಿ ನೇಮಕ….!!

ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಮಣಿಪಾಲದ ಅಧ್ಯಕ್ಷರಾಗಿ ಹರೀಶ್ ಜಿ ಕಲ್ಮಾಡಿ ನೇಮಕ….!!

ಉಡುಪಿ :  2025-2026 ನೇ ಸಾಲಿನ ಈಶ್ವರ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಮಣಿಪಾಲದ  ವಾರ್ಷಿಕ ಮಹಾಸಭೆಯು ದಿನಾಂಕ 19.09.2026 ರಂದು ವೈಷ್ಣವಿ ಸಭಾಭವನ ದಲ್ಲಿ ಜರಗಿತು.

ಅಧ್ಯಕ್ಷರಾದ ಶ್ರೀ ಹರೀಶ ಜಿ ಕಲ್ಮಾಡಿ ಅವರನ್ನು ‌ನೇಮಕ ಮಾಡಿದರು.ಕಾರ್ಯದರ್ಶಿ ಡಾ.ಬಾಲಚಂದ್ರ ರವರು ವಾರ್ಷಿಕ ವರದಿ ಮಂಡಿಸಿದರು , ಕೋಶಾಧಿಕಾರಿ ಶ್ರೀ. ಗಣಪತಿ ಕಾಮತ್ ಅವರು ಗತ ವರ್ಷದ ಲೆಕ್ಕ ಪತ್ರ ಮಂಡಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಸಲಹೆಗಾರರಾದ ಶ್ರೀ ಹೆಚ್ ಕೆ. ವಿಶ್ವನಾಥ ರಾವ್ ಅವರ ಸಾಧನೆ ಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು, ಹಾಗೂ ಕೊರಿಯೋಗ್ರಾಫರ್ ಶ್ರೀಮತಿ ಮುಕ್ತ ಮೇಡಂ, ಕೌನ್ಸಿಲ್ಲರ್ ಮಂಜುನಾಥ್ ಹಾಗೂ ಬಿಗ್ ಬಾಸ್ ಹೋಟೆಲ್ ನ ಮಾಲೀಕರಾದ ಶ್ರೀ ದೇವು ಪೂಜಾರಿ ಅವರನ್ನು ಕೂಡ ಸನ್ಮಾನಿಸಲಾಯಿತು. ತದ ನಂತರ 9 ಜನ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅಸೋಸಿಯೇಷನ್ ಹಾಗೂ ಡಾ.ಕರ್ನಲ್ ಮಾಧವ ಶಾನುಭಾಗ್ ಅವರಿಂದ ಸಹಾಯಧನ ವಿತರಿಸಲಾಯಿತು.

ಕಾರ್ಯಕ್ರಮ ವನ್ನು ಡಾ.ದಿವ್ಯಶ್ರೀ ರಘು ಅವರು ನಿರೂಪಿಸಿದರು. ಅನಂತರ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.