ಆಲಪ್ಪುಳ: ಭಾರತೀಯ ನೌಕಾಪಡೆಯ ಉದ್ಯೋಗವನ್ನು ತೊರೆದು ಯೂಟ್ಯೂಬ್ ಮತ್ತು ನಟನೆಯಲ್ಲಿ ಸಕ್ರಿಯರಾಗಿದ್ದ social influencer ಅಖಿಲ್ ಎನ್‌ಆರ್‌ಡಿ ಅವರ ದಾಂಪತ್ಯ ಜೀವನದಲ್ಲಿ ದಿಢೀರ್ ಬಿರುಗಾಳಿ ಎದ್ದಿದೆ.
ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಮೇಘಾ ರಾತ್ರೋರಾತ್ರಿ ಮನೆಬಿಟ್ಟು ತೆರಳಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಮೇಘಾ ಅವರು ಬಸ್ ಕಂಡಕ್ಟರ್ (ಅಥವಾ ಬಸ್ ಕ್ಲೀನರ್) ಜೊತೆ ಓಡಿ ಹೋಗಿದ್ದಾರೆ ಎಂಬ ಹಾರ್ಟ್ ಬ್ರೇಕಿಂಗ್ ಸುದ್ದಿ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಮೇಘಾ ಕಾಣೆಯಾಗಿರುವ ಬಗ್ಗೆ ಅಖಿಲ್ ನೀಡಿದ ದೂರಿನನ್ವಯ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ, ಅವರು ಬ್ಯಾಗ್‌ನೊಂದಿಗೆ ಮತ್ತೊಬ್ಬ ವ್ಯಕ್ತಿಯ ಜೊತೆ ಹೋಗುತ್ತಿರುವುದು ಪತ್ತೆಯಾಗಿದೆ.
ಆದರೆ, ಅವರು ಕಂಡಕ್ಟರ್ ಜೊತೆಗೇ ಪ್ರೇಮಿಸಿ ತೆರಳಿದ್ದಾರೆ ಎನ್ನುವುದು ಖಚಿತಪಡಿಸಲು ಅವರಿಬ್ಬರೂ ಪ್ರತಿಕ್ರಿಯೆಗೆ ಸಿಗಬೇಕಷ್ಟೆ.
“ಹೋದವರು ಹೋದರು, ಮುಗಿದುಹೋಯಿತು, ಬಿಟ್ಟುಬಿಡಿ…” ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾಯಿ ಕೃಷ್ಣ ಅವರು ಅಖಿಲ್ ಜೊತೆ ಫೋನ್‌ನಲ್ಲಿ ಮಾತನಾಡಿದಾಗ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಯಶಸ್ವಿ ಯೂಟ್ಯೂಬರ್ ಬದುಕಿನಲ್ಲಿ ಸಂಭವಿಸಿದ ಈ ಘಟನೆ “ಹೀಗೂ ಆಗುವುದೆ?” ಎಂಬ ದಿಗ್ಭ್ರಮೆ ಮತ್ತು ವೇದನೆಯನ್ನುಂಟು ಮಾಡಿದೆ.




