ಉಡುಪಿ : ಸಿದ್ಧಿ ಇವೆಂಟ್ಸ್ ಲಕ್ಷ್ಮೀ ನಗರ ಮಲ್ಪೆ ಇವರ ವತಿಯಿಂದ ಅಮ್ಮ ಮಗಳು ವಿಶೇಷ ವೇಷ ಧರಿಸಿದರು. ಅವರ ಉದ್ದೇಶ ನಮ್ಮ ಸಮಾಜದ ಬಡ ಮಕ್ಕಳ ಉಜ್ವಲ ವಿದ್ಯಾಭ್ಯಾಸದ ಕನಸ್ಸಿಗೆ ಆಸರೆಯಾಗಲು ಈ ವೇಷ ಧರಿಸಿ ಬಂದಿರುವಂತಹ ಸಹಾಯ ಧನದ ಒಟ್ಟು ಮೊತ್ತ 3,45,44 ರೂ. ನ್ನು ಅವರು ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದರು.
ವಿದ್ಯಾರ್ಥಿಗಳು: 1) ಮನಸ್ವಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಉದ್ಯಾವರ ಶಾಲೆಯ ಶುಲ್ಕ ವಿಲ್ಲದ ಕಾರಣ 1ವರುಷದ ರಿಕ್ಷಾ ಬಾಡಿಗೆ 12700ರೂ ಹಾಗೂ 10000ರೇಷನ್
ಒಟ್ಟು ಮೊತ್ತ 22,700ರೂ ಸಹಾಯಧನವಾಗಿ ನೀಡುತ್ತಿದ್ದೇವೆ.
2) ಎಂಜಲಿಕ, ಕರ್ನಾಟಕ ಪಬ್ಲಿಕ್ ಸ್ಕೂಲ್, ಉದ್ಯಾವರ. ವಿದ್ಯಾರ್ಥಿಗೆ ದೃಷ್ಟಿದೋಷವಿದ್ದ ಕಾರಣ ಶಾಲೆಯ ರಿಕ್ಷಾ ಬಾಡಿಗೆ 12,700ರೂ +10,000ರೇಷನ್ ಒಟ್ಟು ಮೊತ್ತ 22700ರೂ ಸಹಾಯಧನವಾಗಿ ನೀಡಿದರು.3) ಸಾನ್ವಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಉದ್ಯಾವರ.. 1ವರುಷದ ರಿಕ್ಷಾ ಬಾಡಿಗೆ 9000ರೂ ಹಾಗೂ 10000ರೂ ರೇಷನ್. ಒಟ್ಟು ಮೊತ್ತ 19100ರೂ ಸಹಾಯಧನವಾಗಿ ನೀಡಿ ನೀಡುತ್ತಿರುತ್ತೇವೆ.4) ಚೈತ್ರ, 10ನೇ ತರಗತಿ, ಸರಕಾರಿ ಪ್ರೌಢಶಾಲೆ, ತೆಂಕನಿಡಿಯೂರು, ಮುಂದಿನ ವರುಷದ ಸರಕಾರಿ ಪದವಿಪೂರ್ವ ಕಾಲೇಜು, ತೆಂಕನಿಡಿಯೂರು ಪ್ರಥಮ ಹಾಗೂ ಧ್ವಿತಿಯ ಪಿಯುಸಿ ಎರಡು ವರುಷದ ಕಾಲೇಜು ಶುಲ್ಕ 6000ರೂ ಹಾಗೂ ಶಾಲೆಯ ಇತರ ಕರ್ಚಿಗೆ 4000ರೂ ಹಾಗೂ ರೇಷನ್ ಒಟ್ಟು ಮೊತ್ತ 20000ರೂ ನೀಡಿರುತ್ತೇವೆ.. ವಿನ್ಯಾಸ್, ಸರಕಾರಿ ಪ್ರೌಢಶಾಲೆ ಗರಡಿಮಜಲ್ ತಂದೆಯ ತಂದೆಯು ಕಳೆದ 10ವರುಷ ದಿಂದ ಹಾಸಿಗೆಯಲ್ಲಿ ಇರುವ ಕಾರಣ ಇವರ ಮನೆಯ ಪರಿಸ್ಥಿತಿ ನೋಡಿ ಕುಟುಂಬದ ರೇಶನ್ ವ್ಯವಸ್ಥೆಗಾಗಿ 10000ರೂ ಧನಸಹಾಯ ನೀಡುತ್ತಿದ್ದೇವೆ..
ಹುಟ್ಟು ಅಂಗವಿಕಲತೆ ಇರುವ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ತರಗತಿಯ ವಿದ್ಯಾರ್ಥಿ ಇವರಿಗೆ 10000ರೂ ವೆಚ್ಚದ ಒಂದು ವೀಲ್ ಚೇರ್ ಹಾಗೂ ರೇಶನ್ ಗಾಗಿ 10000 ನೀಡಿರುತ್ತೇವೆ… ಹಾಗೂ ಎಲ್ಲ ವಿಷ್ಯರ್ಥಿಗಳಿಗೆ ಶಾಲೆಗೆ ಅಗತ್ಯವಿರುವಂತಹ ಬ್ಯಾಗ್ ಹಾಗೂ ಕೆಲವೊಂದು ವಸ್ತುಗಳನ್ನು ನೀಡಿ ಸಹಕರಿಸಿದ್ದೇವೆ ದಿವ್ಯ ಕಾಮತ್ ಹಾಗೂ ಸಿದ್ದಿ ಎಸ್ ಕಾಮತ್ ಎಂದು ಹೇಳಿದರು.










