Home Karavali Karnataka ಮಾನಸಿಕ ಅಸ್ವಸ್ಥ ಯುವಕನ ರಕ್ಷಿಸಿ ಸ್ನೇಹಾಲಯಕ್ಕೆ ಸೇರಿಸಿದ್ದ ಸಮಾಜಸೇವಕರು : ಕೊನೆಗೂ ಕುಟುಂಬವನ್ನು ಸೇರಿದ ಯುವಕ…!!

ಮಾನಸಿಕ ಅಸ್ವಸ್ಥ ಯುವಕನ ರಕ್ಷಿಸಿ ಸ್ನೇಹಾಲಯಕ್ಕೆ ಸೇರಿಸಿದ್ದ ಸಮಾಜಸೇವಕರು : ಕೊನೆಗೂ ಕುಟುಂಬವನ್ನು ಸೇರಿದ ಯುವಕ…!!

ಉಡುಪಿ : ಉಡುಪಿ ಜಿಲ್ಲೆಯ ಹಿರಿಯಡ್ಕ ಪರಿಸರದಲ್ಲಿ ಕಳೆದ ಮೂರೂವರೆ ತಿಂಗಳ ಹಿಂದೆ ಮಾನಸಿಕ ಅಸ್ವಸ್ಥ ಯುವಕನೊಬ್ಬ ಮಕ್ಕಳು , ಮಹಿಳೆಯರು, ವೃದ್ದರೆನ್ನದೆ ಎಲ್ಲರಿಗೂ ತೊಂದರೆಕೊಡುತ್ತಿದ್ದು, ಹಲ್ಲೆಗೂ ಯತ್ನಿಸಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಸಾರ್ವಜನಿಕರ ಕರೆಯ ಮೇರೆಗೆ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಜಂಟಿಯಾಗಿ ರಕ್ಷಿಸಿ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ನಂತರ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಮಂಗಳೂರು ಮಂಜೇಶ್ವರದಲ್ಲಿರುವ ಸ್ನೇಹಾಲಯಕ್ಕೆ ಸೇರಿಸಿದ್ದರು.

ಅತಿಯಾದ ಮೊಬೈಲ್ ನ ಗೀಳು ಈತನನ್ನು ಈ ಪರಿಸ್ಥಿತಿಗೆ ಕೊಂಡೊಯ್ದಿದೆ ಎನ್ನಲಾಗಿದೆ.ಸದ್ಯ ಈ ಯುವಕನು ಗುಣಮುಖನಾಗಿದ್ದು , ಸ್ನೇಹಾಲಯ ಸಂಸ್ಥೆಯು ಯುವಕನ ಮನೆಯ ವಿಳಾಸ ಹುಡುಕಿ, ಈತನು ತನ್ನ ಕುಟುಂಬದೊಂದಿಗೆ ಸೇರುವ ಮಹತ್ಕಾರ್ಯವನ್ನು ಮಾಡಿದೆ.

ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಹಾಗೂ ವಿಶುಶೆಟ್ಟಿ ಅಂಬಲಪಾಡಿ ಹಾಗೂ ಸ್ನೇಹಾಲಯ ಸಂಸ್ಥೆಯ ಪ್ರಯತ್ನ , ಇಂದು ಈ ಯುವಕನ ಬದುಕಿಗೆ ಹೊಸ ಅಧ್ಯಾಯವನ್ನು ಸೃಷ್ಟಿಸಿದೆ.