ಉಡುಪಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ ಮಂಗಳೂರು ಎಲ್ಪಿಜಿ ಟೆರಿಟರಿ ವತಿಯಿಂದ ಗ್ರಾಹಕರಿಗೆ ಇನ್ನಷ್ಟು ಅನುಕೂಲಕರ, ಸುರಕ್ಷಿತ ಹಾಗೂ ಸ್ಮಾರ್ಟ್ ಎಲ್ಪಿಜಿ ಆಯ್ಕೆ ಒದಗಿಸುವ ಉದ್ದೇಶದಿಂದ ಭಾರತ್ಗ್ಯಾಸ್ ಜಿಪ್-ಲೈಟ್ (10 ಕೆ.ಜಿ.) ಸಿಲಿಂಡರ್ಅನ್ನು ಉಡುಪಿಯಲ್ಲಿ ಶನಿವಾರ (ಸೆ.19) ಬಿಡುಗಡೆ ಮಾಡಲಾಯಿತು.
ಉಡುಪಿಯ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಉಡುಪಿ ಜಿಲ್ಲೆಯ ಎಲ್ಲ ಎಲ್ಪಿಜಿ ಭಾರತ್ಗ್ಯಾಸ್ ವಿತರಕರ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಲೋಕಾಯುಕ್ತ ಇನ್ಸ್ಪೆಕ್ಟರ್ ಮಂಜುನಾಥ್ ಶಂಕರಹಳ್ಳಿ ಉದ್ಘಾಟಿಸಿ, ಶುಭ ಹಾರೈಸಿದರು.
ಬಿಪಿಸಿಎಲ್ ಮಂಗಳೂರು ಟೆರಿಟರಿ ಮ್ಯಾನೇಜರ್ ಸಂದೀಪಕುಮಾರ್ ರೈನಾ, ಮಂಗಳೂರು ಎಲ್ಪಿಜಿ ವಿಭಾಗದಸೇಲ್ಸ್ ಮ್ಯಾನೇಜರ್ದರ್ಶಿತ್ ಮಾಲ್ವಿಯಾ ಹಾಗೂ ಉಡುಪಿ ಇನ್ನರ್ ವೀಲ್ ಕ್ಲಬ್ನ ಮಾಜಿ ಅಧ್ಯಕ್ಷೆ ನಿರ್ಮಲಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಭಾರತ್ಗ್ಯಾಸ್ ಜಿಪ್-ಲೈಟ್ ಸಿಲಿಂಡರ್ ಬಿಡುಗಡೆ ಕಾರ್ಯಕ್ರಮದ ನಿಮಿತ್ತ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ವಿಭಾಗ ಹಾಗೂ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಹೈಸ್ಕೂಲ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ‘ಭಾರತ್ಗ್ಯಾಸ್- ಸ್ವಚ್ಛ, ಸುರಕ್ಷಿತ ಹಾಗೂ ಹಸಿರು ಭವಿಷ್ಯ ಚಿಗುರು- ಚಿತ್ತಾರ’ ಎಂಬ ಆಶಯದೊಂದಿಗೆ ಸ್ಪರ್ಧೆ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ತಮ್ಮ ಕಲ್ಪನೆ ಮತ್ತು ಸೃಜನಶೀಲತೆಯಲ್ಲಿ ಸ್ವಚ್ಛ ಪರಿಸರದ ಭಾವ ವ್ಯಕ್ತಪಡಿಸಿದರು. ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಚಿತ್ರಕಲಾ ಸ್ಪರ್ಧೆಯ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ಸುರಕ್ಷಿತ ಎಲ್ಪಿಜಿ ಬಳಕೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿತ್ತು.



