Home Crime ಶಂಕರನಾರಾಯಣ : ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹತ್ಯೆ…!!

ಶಂಕರನಾರಾಯಣ : ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹತ್ಯೆ…!!

ಶಂಕರನಾರಾಯಣ: ತಂದೆಯ ಮರಣದ ಬಳಿಕ ತಾಯಿಗೆ ಪಾರ್ಶ್ವವಾಯು ತಗುಲಿದ್ದರಿಂದ ಮಾನಸಿಕವಾಗಿ ನೊಂದಿದ್ದ ಮಹಿಳೆಯೊಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಪಾರು ಗ್ರಾಮದಲ್ಲಿ ನಡೆದಿದೆ.

ಅಂಪಾರು ಗ್ರಾಮದ 36 ವರ್ಷದ ವನಜಾಕ್ಷೀ ಮೃತ ಮಹಿಳೆ.

ತಂದೆ ಮೃತಪಟ್ಟ ಬಳಿಕ ತಾಯಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ವನಜಾಕ್ಷೀ ಅವರು ತಂದೆ-ತಾಯಿ ವಿಚಾರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಸೆಪ್ಟೆಂಬರ್ 2ರಂದು ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಮನೆಯಲ್ಲಿ ಮಲಗಿದ್ದ ವನಜಾಕ್ಷೀ ಕಾಣೆಯಾಗಿದ್ದರು.

ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಬಳಿಕ ಸಂಜೆ ಸುಮಾರು 6.30ರ ವೇಳೆಗೆ ಬಾಡಿಗೆ ಮನೆಯ 50 ಮೀಟರ್ ದೂರದಲ್ಲಿದ್ದ ಹಳೆಯ ಬಾವಿಯಲ್ಲಿ ವನಜಾಕ್ಷೀ ಅವರ ಮೃತದೇಹ ಪತ್ತೆಯಾಗಿದೆ.

ತಂದೆಯ ಮರಣ ಹಾಗೂ ತಾಯಿಯ ಅನಾರೋಗ್ಯದಿಂದ ಮಾನಸಿಕವಾಗಿ ನೊಂದು ವನಜಾಕ್ಷೀ ಅವರು ಮನೆಯ ಸಮೀಪದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.