Home Crime ಹಾಸನ : ಡ್ರಗ್ಸ್ ದಂಧೆ : 5 ಮಂದಿ ಆರೋಪಿಗಳು ಅರೆಸ್ಟ್…!!

ಹಾಸನ : ಡ್ರಗ್ಸ್ ದಂಧೆ : 5 ಮಂದಿ ಆರೋಪಿಗಳು ಅರೆಸ್ಟ್…!!

ಹಾಸನ : ನಗರದಲ್ಲಿ ಮಾದಕ ವಸ್ತುಗಳ ದಂಧೆ ನಡೆಸಲು ಯತ್ನಿಸುತ್ತಿದ್ದ ಐವರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ರಾಜ್‌ಕುಮಾರ್ ನಗರ ಬಳಿಯ ಚೆಕ್‌ಪೋಸ್ಟ್‌ನಲ್ಲಿ ನಡೆದ ತಪಾಸಣೆ ವೇಳೆ ಎಂಡಿಎಂಎ ಡ್ರಗ್ಸ್ ಸಾಗಾಟ ಪತ್ತೆಯಾಗಿದೆ.

ಬಂಧಿತರನ್ನು ಪರ್ವೀಜ್ (29), ಸುಹೇಲ್ (24), ಅಬ್ದುಲ್ ಯಾಸಿನ್ (20), ಇಬ್ರತ್ ಖಾನ್ (24) ಹಾಗೂ ಸೈಯದ್ ಯೂಸಫ್ (23) ಎಂದು ಗುರುತಿಸಲಾಗಿದೆ.

ಇವರಲ್ಲಿ ನಾಲ್ವರು ಶಿವಮೊಗ್ಗ ಮೂಲದವರು ಹಾಗೂ ಒಬ್ಬ ಹಾಸನ ಮೂಲದವನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಎರ್ಟಿಗಾ ಕಾರನ್ನು ತಡೆದು ಪರಿಶೀಲಿಸಿದ ಪೊಲೀಸರಿಗೆ ಕಾರಿನೊಳಗೆ ಸುಮಾರು ₹2 ಲಕ್ಷಕ್ಕೂ ಅಧಿಕ ಮೌಲ್ಯದ 40 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ತಕ್ಷಣವೇ ಕಾರು ಹಾಗೂ ಡ್ರಗ್ಸ್ ವಶಕ್ಕೆ ಪಡೆದು ಐವರನ್ನೂ ಬಂಧಿಸಲಾಗಿದೆ.

ಪೆನ್‌ಮೊಹಲ್ಲಾ ಸಿಪಿಐ ಸ್ವಾಮಿನಾಥ್ ನೇತೃತ್ವದಲ್ಲಿ ಪಿಎಸ್‌ಐ ರವಿಶಂಕರ್ ಹಾಗೂ ಸಿಬ್ಬಂದಿಗಳಾದ ಪ್ರಸನ್ನಕುಮಾರ್, ದಿಲೀಪ್, ಪುನೀತ್, ಲೋಕೇಶ್, ಹನುಮೇಶ್ ಮತ್ತು ದಿಲೀಪ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಈ ಕುರಿತು ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ವಿಚಾರಣೆಗೊಳಪಡಿಸಲಾಗಿದೆ. ಡ್ರಗ್ಸ್ ಜಾಲದ ಹಿಂದಿರುವ ಇನ್ನಷ್ಟು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.