Home Crime ಪಣಂಬೂರು: ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ…!!

ಪಣಂಬೂರು: ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ…!!

ಮಂಗಳೂರು : ತಾಲೂಕು ಬೈಕಂಪಾಡಿ ಗ್ರಾಮದ ಕುಡುಂಬೂರು ಎಂಬಲ್ಲಿರುವ ಪೂಜಾ ಮೊಬೈಲ್ಸ್ ಎಂಬ ಮೊಬೈಲ್ ಅಂಗಡಿಯಲ್ಲಿ ಸುಮಾರು 2,17,740 ರೂಪಾಯಿ ಮೌಲ್ಯದ ಮೊಬೈಲ್ ಫೋನ್, ಅದರ ಬಿಡಿಭಾಗ, ಸಿಸಿಟಿವಿ ಡಿವಿಆರ್ ಹಾಗೂ 2,100 ನಗದು ಹಣವನ್ನು ಕಳವು ಮಾಡಿ, 10 ಸಾವಿರ ಮೌಲ್ಯದ ಎರಡು ಕಂಪ್ಯೂಟರ್ ಮೊನಿಟರನ್ನು ಒಡೆದು ನಷ್ಟವುಂಟು ಮಾಡಿರುವ ಪ್ರಕರಣಕ್ಕೆ ಸಂಬಂದಿಸಿ ಈ ಹಿಂದೆ 2018 ರಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ. ಸಂಖ್ಯೆ: 152/2018 ರಂತೆ ಪ್ರಕರಣ ದಾಖಲಾಗಿರುತ್ತು.

ಪ್ರಕರಣದ ಆರೋಪಿಗಳಲ್ಲೊಬ್ಬನಾದ ಅಸ್ಸಾಂ ಮೂಲದ ಪಾರೂಲ್ ಹುಸೈನ್ ಲಸ್ಕರ್ ಯಾನೆ ಪಾರೂಲ್, ಎಂಬಾತ ಕಳೆದ 6 ವರ್ಷಗಳಿಂದ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಆರೋಪಿತನ ವಿರುದ್ದ ದಸ್ತಗಿರಿ ವಾರಂಟ್ ನ್ನು ಹೊರಡಿಸಿತ್ತು. ಆರೋಪಿಯನ್ನು ಕಾಸರಗೋಡು ಮಂಜೇಶ್ವರದ ಬಳಿ ಮೇಲಾಧಿಕಾರಿಗಳ ನಿರ್ದೇಶನದಂತೆ, ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ರವರ ಮಾರ್ಗದರ್ಶನದಲ್ಲಿ, ಸಿಬಂಧಿಗಳಾದ ನವೀನ ಚಂದ್ರ, ಸಯ್ಯದ್ ಇಂತಿಯಾಜ್, ರಾಕೇಶ್ ಮತ್ತು ವಿನಯ್ ರವರು ದಿನಾಂಕ: 11.05.2026 ರಂದು ದಸ್ತಗಿರಿ ಮಾಡಿ, ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.