Home Latest ಹುತಾತ್ಮರ ಸ್ಮರಣೆಯಿಂದ ಕರ್ತವ್ಯ ಪ್ರಜ್ಞೆ ಜಾಗೃತಿ : ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್ ಪಿ…!!

ಹುತಾತ್ಮರ ಸ್ಮರಣೆಯಿಂದ ಕರ್ತವ್ಯ ಪ್ರಜ್ಞೆ ಜಾಗೃತಿ : ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್ ಪಿ…!!

ಉಡುಪಿ: ಅರಣ್ಯವೆಂದರೆ ಪ್ರಕೃತಿ ಮಾತೆಯೇ ಆಗಿದ್ದು, ಎಲ್ಲರ ಜೀವನ ಸೂಕ್ತವಾಗಿ ಸಾಗಲು, ಸಮರ್ಪಕವಾಗಿ ಮಳೆಯಾಗಲು ಕಾಡಿನ ಅವಶ್ಯಕತೆಯಿದೆ. ಅವುಗಳ ರಕ್ಷಣಾ ಕಾರ್ಯದಲ್ಲಿ ಹುತಾತ್ಮರಾದ ಇಲಾಖೆಯ ಅಧಿಕಾರಿ, ಸಿಬ್ಬಂದಿಯ ಸ್ಮರಣೆ ಅತ್ಯಗತ್ಯ. ಅದರಿಂದ ಸೇವೆಯಲ್ಲಿರುವ ಎಲ್ಲರಿಗೂ ಕರ್ತವ್ಯ ಪ್ರಜ್ಞೆ ಜಾಗೃತಿಯಾಗುತ್ತದೆ ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್ ಪಿ. ಅಭಿಪ್ರಾಯಪಟ್ಟರು.

ಉಡುಪಿಯ ಐಎಂಎ ಭವನದಲ್ಲಿ ಉಪವಲಯ ಅರಣ್ಯಾಧಿಕಾರಿಗಳ ಸಂಘ ಹಾಗೂ ಗಸ್ತು ಅರಣ್ಯ ಪಾಲಕರ ಸಂಘದ ವತಿಯಿಂದ ಅರಣ್ಯ ಹುತಾತ್ಮರ ದಿನದ ನಿಮಿತ್ತ ಶುಕ್ರವಾರ (ಸೆ.11) ಆಯೋಜಿಸಿದ್ದ ಬೃಹತ್ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಉಪ ವಲಯ ಅರಣ್ಯ ಅಧಿಕಾರಿಗಳ ಸಂಘದ ಉಡುಪಿ ಜಿಲ್ಲಾಧ್ಯಕ್ಷ ನಾಗೇಶ್ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.

ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಕೇಶವ ಪೂಜಾರಿ ಎಂ., ಉಡುಪಿ ಸಾಯಿರಾಧಾ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಮನೋಹರ್ ಎಸ್. ಶೆಟ್ಟಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮ ರಾವ್, ಐಎಂಎ ಉಡುಪಿ ಅಧ್ಯಕ್ಷ ಡಾ. ಅಶೋಕ್ ಕಾಮತ್, ಸಾಮಾಜಿಕ. ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಡಿ.ಎನ್., ಸಿದ್ದಾಪುರ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಡಿ. ದಿನೇಶ್, ಸರ್ಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ದಿನಕರ್ ಶೆಟ್ಟಿ ಅಂಪಾರು, ವಲಯ ಅರಣ್ಯಾಧಿಕಾರಿಗಳ ಸಂಘದ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಕಿರಣಕುಮಾರ್, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಉಪಸ್ಥಿತರಿದ್ದರು.

ಸಂಘದ ಪದಾಧಿಕಾರಿಗಳಾದ ರವಿ, ಕರುಣಾಕರ್ ಜೆ. ಆಚಾರ್ಯ, ನಾಗರಾಜ್, ಜಿ.ಕೃಷ್ಣಪ್ಪ, ಉಗ್ರಪ್ಪ ಗೌಡ, ರಾಘವೇಂದ್ರ ಶೆಟ್ಟಿ, ಜಯರಾಮ ಎ., ಮಂಜು ಗಾಣಿಗ, ಅವಿನಾಶ್, ಗಣೇಶ್ ದೇವಾಡಿಗ, ವಿನಯ್ ಜಿ. ನಾಯಕ್, ಗೋವಿಂದ ಎಂ. ಪಟಗಾರ್, ಮಹಾಂತೇಶ್ ಎಚ್.ಜಿ., ರಾಮಚಂದ್ರ ನಾಯ್ಕ, ಶೃುತಿ ಶೇಖರ್ ಗೌಡ, ಮಹೇಶ್ ಎಸ್. ಮಲ್ಲಾಡದ್, ಸಂತೋಷ್ ಜೋಗಿ, ಶ್ರೀನಿವಾಸ್ ಜೋಗಿ, ಮಾಜಿ ಅಧ್ಯಕ್ಷರಾದ ಕೆ.ಭಾಸ್ಕರ್, ಪ್ರಕಾಶ್ಚಂದ್ರ, ಜೀವನ್ ದಾಸ್, ಹಿರಿಯ ಗೌರವ ಸಲಹೆಗಾರ ಸುರೇಶ್ ಗಾಣಿಗ ಪಾಲ್ಗೊಂಡಿದ್ದರು.

ಅರಣ್ಯ ರಕ್ಷಣೆಯಲ್ಲಿ ಮಡಿದ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು. 175ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಯಿತು. 100ಕ್ಕೂ ಹೆಚ್ಚು ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.