Home Crime ಮುಸ್ಲಿಂ ಯುವಕನೋರ್ವನಿಗೆ ನಾಲ್ಕು ಮಂದಿಯ ತಂಡವೊಂದು ಚೂರಿ ಇರಿದು ಪರಾರಿ…!!

ಮುಸ್ಲಿಂ ಯುವಕನೋರ್ವನಿಗೆ ನಾಲ್ಕು ಮಂದಿಯ ತಂಡವೊಂದು ಚೂರಿ ಇರಿದು ಪರಾರಿ…!!

ಬಂಟ್ವಾಳ : ಮುಸ್ಲಿಂ ಯುವಕನೋರ್ವನಿಗೆ ನಾಲ್ಕು ಮಂದಿಯ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ಸು ನಿಲ್ದಾಣ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಚೂರಿ ಇರಿತಕ್ಕೊಳಗಾದವರನ್ನು ಇಲ್ಲಿನ ನಿವಾಸಿ, ಪೈಂಟರ್ ವೃತ್ತಿಯ ಹಮೀದ್ ಯಾನೆ ಅಮ್ಮಿ ಎಂದು ಗುರುತಿಸಲಾಗಿದೆ.

ಇರಿತದಿಂದ ಹಮೀದ್ ಅವರ ಕೈಗೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆಗೆ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.