Home Crime ಮಲ್ಪೆ: ಬೋಟಿನಲ್ಲಿ ಗಾಯಗೊಂಡಿದ್ದ ಮೀನುಗಾರ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು…!!

ಮಲ್ಪೆ: ಬೋಟಿನಲ್ಲಿ ಗಾಯಗೊಂಡಿದ್ದ ಮೀನುಗಾರ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು…!!

ಮಲ್ಪೆ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಬೋಟಿನ ಹಗ್ಗ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮೀನುಗಾರರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆ ಮಲ್ಪೆಯ ಜಗನ್ನಾಥ ಕುಮಾರ್ ಅವರ ಮಾಲಿಕತ್ವದ “ಸೌಜನ್ಯ ಸಾಗರ” IND-KA-02-MM-6150 ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದ ಎಲ್. ಪುರುಷೋತ್ತಮ್ 37 ಅವರೇ ಮೃತರು ಎಂದು ತಿಳಿಯಲಾಗಿದೆ.

ದಿನಾಂಕ: 24-08-2026 ರಂದು ಬೆಳಿಗ್ಗೆ 06:00 ಗಂಟೆಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಬೆಳಿಗ್ಗೆ ಸುಮಾರು 08:30 ಕ್ಕೆ ಅರಬ್ಬಿ ಸಮುದ್ರದಲ್ಲಿ ವಾತಾವರಣ ಏರಿಳಿತದಿಂದ ಗಾಳಿ ಜೋರಾಗಿ ಬೀಸಿತು.

ಈ ವೇಳೆ ಬೋಟಿಗೆ ಕಟ್ಟಿದ್ದ ಹಗ್ಗ ಜಾರಿ ಒಮ್ಮೆಲೇ ಹಿಂದಕ್ಕೆ ಎಳೆಯಲ್ಪಟ್ಟ ಪರಿಣಾಮ ಬೋಟಿನ ಒಳಗೆ ಪುರುಷೋತ್ತಮ್ ಅವರು ಬಿದ್ದು ಗಾಯಗೊಂಡರು.

ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆದರ್ಶ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ UDR ಕ್ರಮಾಂಕ: 53/2026, ಕಲಂ: 194 BNSS 2023 ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.