Home Crime ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿ ಅರೆಸ್ಟ್…!!

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿ ಅರೆಸ್ಟ್…!!

ಹಿರಿಯಡ್ಕ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ಆರೋಪಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಹಾರ್ಡ್‌ ವೇ‌ರ್ ಅಂಗಡಿಯಲ್ಲಿರುವ ಬಿಹಾರ ಮೂಲದ ಕಾರ್ಮಿಕ ರಾಮಚಂದ್ರ ರಾಜ್ವರ್(35) ಅತ್ಯಾಚಾರಗೈದ ಆರೋಪಿ.

ಈತ ಅಪ್ರಾಪ್ತ ಬಾಲಕಿ ಸೋಮವಾರ ಸಂಜೆ ಅಂಗಡಿಗೆ ಹೋಗುತ್ತಿರುವ ಸಂದರ್ಭದಲ್ಲಿ ಹಿಂಬಾಲಿಸಿ ಅತ್ಯಾಚಾರಗೈದು ಬಳಿಕ ವಿಷಯ ಯಾರಿಗೂ ತಿಳಿಸಿಬಾರದು ಎಂದು ಹಲ್ಲೆಗೈದಿದ್ದಾನೆ.

ಬಾಲಕಿಯ ಪೋಷಕರು ನೀಡಿದ ದೂರಿನಂತೆ ಮಹಿಳಾ ಠಾಣೆಯಲ್ಲಿ ಫೋಕ್ಸ್ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೆರ್ಡೂರಿನಲ್ಲಿ ಬಂಧಿಸಿದ್ದಾರೆ.