ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಮನೆಯಂಗಳಕ್ಕೆ ಚಿರತೆ ಬಂದ ಘಟನೆ ಸಂಭವಿಸಿದೆ.
ಶಿರೂರು ಸಮೀಪದ ಅಲಂದೂರು ಗ್ರಾಮದ ಹಕ್ಲು ಮನೆ ಪರಿಸರದಲ್ಲಿ ಚಿರತೆ ಓಡಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಆಹಾರವನ್ನು ಅರಸುತ್ತಾ ಚಿರತೆ ಮನೆಯಂಗಳಕ್ಕೆ ಆಗಮಿಸಿದೆ.ಇದನ್ನು ನೋಡಿ ಮನೆಯ ಎರಡು ನಾಯಿಗಳು ಹೆದರಿ ಓಡಿದೆ ಎನ್ನಲಾಗಿದೆ.
ಚಿರತೆ ಸರೆ ಹಿಡಿಯಲು ಅರಣ್ಯ ಇಲಾಖೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





