Home Crime ಪುತ್ತೂರು : ನಕಲಿ ಷೇರುಮಾರುಕಟ್ಟೆಯಲ್ಲಿ ಹೂಡಿಕೆ : 51 ಲಕ್ಷ ಕಳೆದುಕೊಂಡ ವ್ಯಕ್ತಿ…!!

ಪುತ್ತೂರು : ನಕಲಿ ಷೇರುಮಾರುಕಟ್ಟೆಯಲ್ಲಿ ಹೂಡಿಕೆ : 51 ಲಕ್ಷ ಕಳೆದುಕೊಂಡ ವ್ಯಕ್ತಿ…!!

ಪುತ್ತೂರು : ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುತ್ತಿರುವ ಪುತ್ತೂರಿನ ವ್ಯಕ್ತಿಯೊಬ್ಬರು , ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬಂದ ಜಾಹಿರಾತು ನೋಡಿ ಅದರಲ್ಲಿದ್ದ ವಾಟ್ಸಾಫ್ ಗ್ರೂಪ್ ಗೆ ಸೇರಿ ಅಲ್ಲಿ ನಕಲಿ ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿ 51 ಲಕ್ಷ ಕಳೆದುಕೊಂಡಿದ್ದಾರೆ.

ಪುತ್ತೂರಿನ ನಿವಾಸಿಯಾಗಿರುವ ವ್ಯಕ್ತಿ ಈ ಹಿಂದೆ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುತ್ತಿದ್ದರು.

15-11-2025 ರಂದು ಫೇಸ್‌ಬುಕ್‌ನಲ್ಲಿ ಹೆಚ್ಚು ಲಾಭಾಂಶದ ಜಾಹೀರಾತು ನೋಡಿ ವಾಟ್ಸಪ್ ಗ್ರೂಪ್‌ಗೆ ಸೇರಿರುತ್ತಾರೆ. ಸದ್ರಿ ಗ್ರೂಪ್ ಹಾಗೂ ವಾಟ್ಸಪ್ ಮೂಲಕ ಅಪರಿಚಿತರು VSL (Ventura Securities Limited) ಹೆಸರಿನ ನಕಲಿ ವೆಬ್‌ಪೇಜ್ ಲಿಂಕ್ ಕಳುಹಿಸಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಅದನ್ನು ನಂಬಿ ಪುತ್ತೂರಿನ ವ್ಯಕ್ತಿ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ.51,57,000/- ಹಣ ವರ್ಗಾಯಿಸಿದ್ದಾರೆ.

ನಂತರ ವೆಬ್‌ಪೇಜ್‌ನಲ್ಲಿ ಹೆಚ್ಚಿನ ಬ್ಯಾಲೆನ್ಸ್ ತೋರಿಸಿದರೂ ಹಣ ವಾಪಸ್ ಪಡೆಯಲು ಸಾಧ್ಯವಾಗಿಲ್ಲ. ನಂತರ ಅದು ನಕಲಿ ವೆಬ್‌ಪೇಜ್ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.