Home Karavali Karnataka ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ತಡೆ…!!

ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ತಡೆ…!!

ರೈತ ಸಂಘ ಮತ್ತು ಎಂಟು ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ತಡೆ ಬಿದ್ದಿದೆ. ಇದರ ವಿರುದ್ಧ ರೈತ ಸಂಘ, ಬಿಜೆಪಿ ಮತ್ತು 8 ಗ್ರಾಮದ ಗ್ರಾಮಸ್ಥರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

ಸಿದ್ದಾಪುರದಲ್ಲಿ ಜನಾಗ್ರಹ ಸಭೆ ಯುತ್ತಿದ್ದು ಪ್ರತಾಪ್ ಚಂದ್ರ ಶೆಟ್ಟಿ ಸಹಿತ ಬಿಜೆಪಿ ಮುಖಂಡರು ಇದರಲ್ಲಿ ಭಾಗಿಯಾಗಿದ್ದಾರೆ. ಎಂಟು ಗ್ರಾಮಗಳಿಗೆ ನೀರಾವರಿ ಯೋಜನೆಯನ್ನು ಮಾಡಿಕೊಡಿ ಎಂದು ರೈತರು ಹಸಿರು ಶಾಲು ಬೀಸಿ ಒತ್ತಾಯ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವ ಪಕ್ಷದ ನಾಯಕ ಮಾಜಿ ಸ್ಪೀಕರ್ ಮಾಜಿ ಶಾಸಕ ಪ್ರತಾಪ್ ಚಂದ್ರ ಶೆಟ್ಟಿ ತೊಡೆತಟ್ಟಿದ್ದಾರೆ. ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸಾವಿರಾರು ಜನ ಬೃಹತ್ ಜನಾಗೃಹ ಸಭೆಯಲ್ಲಿ ಜಮಾಯಿಸಿದ್ದು ರಸ್ತೆ ಜಾಥ ನಡೆಸಿ ನೀರಾವರಿ ಯೋಜನಾ ಕಚೇರಿಗೆ ಮನವಿ ನೀಡಲಿದ್ದಾರೆ.

ಹೋರಿಯಬ್ಬೆ ಡ್ಯಾಮ್ ಬಳಿ ಪವರ್ ಪ್ರಾಜೆಕ್ಟ್ ಇದ್ದು, ಆ ಸ್ಥಳದಲ್ಲಿ ಹೊಸ ಪ್ರಾಜೆಕ್ಟ್ ಮಾಡಬಾರದು ಎಂಬ ಕಾರಣಕ್ಕೆ ತಡೆ ತರಲಾಗಿದೆ ಎಂಬ ಅಭಿಪ್ರಾಯವೂ ಇದೆ. ಒಟ್ಟಾರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಾತೀತವಾಗಿ ಈ ಹೋರಾಟ ಕೈಗೆತ್ತಿಕೊಂಡಿದ್ದು ಭಾರೀ ಸಂಖ್ಯೆಯಲ್ಲಿ ರೈತರು ಮತ್ತು ಸ್ಥಳೀಯರು ಇದರಲ್ಲಿ ಭಾಗಿಯಾಗಿದ್ದಾರೆ.