Home Karnataka ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಗೆ ಅ.ರಾ. ಪ್ರಭಾಕರ ಪೂಜಾರಿ ನೂತನ ಅಧ್ಯಕ್ಷ…!!

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಗೆ ಅ.ರಾ. ಪ್ರಭಾಕರ ಪೂಜಾರಿ ನೂತನ ಅಧ್ಯಕ್ಷ…!!

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾಗಿ ಅ.ರಾ. ಪ್ರಭಾಕರ ಪೂಜಾರಿಯವರನ್ನು ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ ಆಯ್ಕೆಮಾಡಿ ಆದೇಶ ಹೊರಡಿಸಿದ್ದಾರೆ.

ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡರವರ ಮಾರ್ಗದರ್ಶನದಲ್ಲಿ ನೂತನ ತಂಡವನ್ನು ರಚಿಸಿ ಜಿಲ್ಲೆ ಯಾದ್ಯಂತ ಕನ್ನಡಪರ ಕೆಲಸಗಳನ್ನು ನಡೆಸುತ್ತಾ, ಕನ್ನಡ ಹಾಗು ಕರ್ನಾಟಕಕ್ಕೆ ಅನ್ಯಾಯವೆಸ ಗುವವರ ವಿರುದ್ಧ ಹೋರಾಡಲು ಸದಾ ಸಿದ್ದರಿದ್ದೇವೆ ಎಂದು ನೂತನ ಅಧ್ಯಕ್ಷ ಅ.ರಾ.ಪ್ರಭಾಕರ ಪೂಜಾರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.