Home Karavali Karnataka ಉಡುಪಿ : ವಸತಿ ಶಾಲೆಯ 6 ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ…!!

ಉಡುಪಿ : ವಸತಿ ಶಾಲೆಯ 6 ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ…!!

ಉಡುಪಿ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ನಾರಾಯಣ ಗುರು ವಸತಿ ಶಾಲೆಗಳಲ್ಲಿ 2026-27 ನೇ ಸಾಲಿಗೆ 6 ನೇ ತರಗತಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಜನವರಿ 25 ಕೊನೆಯ ದಿನವಾಗಿದ್ದು, ಸಮೀಪದ ವಸತಿ ಶಾಲೆಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ರಹ್ಮಾವರದ ಆರೂರು ದೂ.ಸಂಖ್ಯೆ: 9482625925, ಕಾಪು ತಾಲೂಕಿನ ಕಳತ್ತೂರು ದೂ.ಸಂಖ್ಯೆ: 9535225409, ಪಟ್ಲ ಹಿರೇಬೆಟ್ಟು ದೂ.ಸಂಖ್ಯೆ: 8970292710, ಹೆರಂಜಾಲು ದೂ.ಸಂಖ್ಯೆ:8073860074, ಕಾರ್ಕಳ ಮಿಯ್ಯಾರು ದೂ.ಸಂಖ್ಯೆ: 9739790298 ಹಾಗೂ ಯಡ್ಯಾಡಿ-ಮತ್ಯಾಡಿ ದೂ.ಸಂಖ್ಯೆ: 9901519126, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಶಂಕರನಾರಾಯಣ ದೂ.ಸಂಖ್ಯೆ: 6363120177 ಹಾಗೂ ಅಜೆಕಾರು ದೂ.ಸಂಖ್ಯೆ: 7204909862,ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ ದೂ.ಸಂಖ್ಯೆ: 9482487266 ಹಾಗೂ ನಾರಾಯಣ ಗುರು ವಸತಿ ಶಾಲೆ ವಡ್ಡರ್ಸೆ ದೂ.ಸಂಖ್ಯೆ:8867415291 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.