ರಾಮಕುಂಜ: ಕಡಬ ತಾಲೂಕು ಕೊಯಿಲ ಗ್ರಾಮದ ಕುದುಲೂರು ನಿವಾಸಿ ಅಣ್ಣು ಎಂಬುವವರ ಪುತ್ರ ಗುರುಪ್ರಸಾದ್ (35) ಅವರು ಆ.22 ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಗುರುಪ್ರಸಾದ್ ಅವರು ರಿಕ್ಷಾ ಚಾಲಕರಾಗಿದ್ದು ಗೋಳಿತ್ತಡಿ ಪೇಟೆಯಲ್ಲಿ ಬಾಡಿಗೆಗೆ ರಿಕ್ಷಾ ಓಡಿಸುತ್ತಿದ್ದರು. ಇದರ ಜೊತೆಗೆ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿದಿನ ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದರು.
ಆ.22 ರಂದು ಮಧ್ಯಾಹ್ನ ಎಂದಿನಂತೆ ಶಾಲೆಗೆ ಮಕ್ಕಳನ್ನು ಕರೆತರಲು ಮನೆಯಿಂದ ಹೊರಡುವ ಸಮಯದಲ್ಲಿ ಎದೆನೋವು ಕಾಣಿಸಿದ್ದು, ಕೂಡಲೇ ಮನೆಮಂದಿ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಗುರುಪ್ರಸಾದ್ ಅವರು ಆ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಸಹೋದರ ಸಹೋದರಿಯನ್ನು ಅಗಲಿದ್ದಾರೆ.





