Home Karavali Karnataka ಕುಂದಾಪುರ ನ್ಯಾಯಾಲಯ ಸಂಕೀರ್ಣ ಮತ್ತು ತಾಲೂಕು ಕಚೇರಿ ಎದುರುಗಡೆ ತೆರೆದ ಬಾವಿ : ಪುರಸಭೆ ನಿರ್ಲಕ್ಷ್ಯ…!!

ಕುಂದಾಪುರ ನ್ಯಾಯಾಲಯ ಸಂಕೀರ್ಣ ಮತ್ತು ತಾಲೂಕು ಕಚೇರಿ ಎದುರುಗಡೆ ತೆರೆದ ಬಾವಿ : ಪುರಸಭೆ ನಿರ್ಲಕ್ಷ್ಯ…!!

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ವ್ಯಾಪ್ತಿಯ ಹೃದಯ ಭಾಗದಲ್ಲಿರುವ ಕುಂದಾಪುರ ತಾಲೂಕು ಕಚೇರಿ, ಹಾಗೂ ನ್ಯಾಯಾಲಯ ಸಂಕೀರ್ಣ ಕೆಲಸಕ್ಕೆ ದಿನನಿತ್ಯ ಗ್ರಾಮೀಣ ಭಾಗದ ಹಾಗೂ ಜನರು ಹಾಗೂ ನ್ಯಾಯಾಲಯಕ್ಕೆ ರಾಜ್ಯದ ವಿವಿಧ ಭಾಗದಿಂದ ದಿನನಿತ್ಯ ಸಾವಿರಾರು ಜನರು ಆಗಮಿಸುವ ಸ್ಥಳ ಇದಾಗಿದೆ ತಾಲೂಕು ಕಚೇರಿ ಹಾಗೂ ನ್ಯಾಯಾಲಯ ಸಂಕೀರ್ಣ ದ ಎದುರುಗಡೆ ಇರುವ ತೆರೆದ ಬಾವಿ ಜವಾ ರಾಯನ ದಾರಿಯಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ

ಕುಂದಾಪುರ ಪುರಸಭೆ ವ್ಯಾಪ್ತಿಗೆ ಸಂಬಂಧಿಸಿದ ತೆರೆದ ಬಾವಿ ಇದಾಗಿದ್ದು ಬಾವಿಗೆ ತಡೆಗೋಡೆ ಹಾಗೂ ಬಾವಿಗೆ ಕಬ್ಬಿಣದ ಮೆಸ್ ಮಾಡದೆ ಸುಮ್ಮನೆ ಇರುವುದು ನೋಡಿ ವರದಿಗಾರರು ಪುರಸಭೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೆ ಫೋನ್ ಕರೆ ಮೂಲಕ ಮಾಹಿತಿ ನೀಡಿದರು ತೆರೆದ ಬಾವಿ ಪರಿಶೀಲನೆ ಮಾಡದೆ ನಿರ್ಲಕ್ಷ್ಯ  ಮಾಡುತ್ತಿದ್ದಾರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ದಂತೆ ವರ್ತಿಸುತ್ತಿದ್ದಾರೆ , ಈ ತೆರೆದ ಬಾವಿಯಿಂದ ಇನ್ನು ಮುಂದಿನ ದಿನದಲ್ಲಿ ಯಾವುದೇ ರೀತಿಯಲ್ಲಿ ಜನರಿಗೆ ಅನಾಹುತಗಳು ಸಂಭವಿಸಿದರೆ ಅದರ ನೇರ ಹೊಣೆ ಪುರಸಭೆ ಎನ್ನಲಾಗುತ್ತಿದೆ,

ತೆರೆದ ಬಾವಿಗೆ ಕಬ್ಬಿಣದ ಮೆಸ್ ಮಾಡಲು 10 ಸಾವಿರದ ಖರ್ಚು ಗೆ ಹೆದರಿ ಪುರಸಭೆ ನಿರ್ಲಕ್ಷ ಮಾಡಿದರೆ ಇನ್ನು ಯಾವ ಕೆಲಸ ಮಾಡಲು ಸಾಧ್ಯ ಎಂದು ಅಂಬೇಡ್ಕರ್ ಸೇನೆ ರಿ ಉಡುಪಿಯ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಜನ ಪ್ರತಿನಿಧಿಗಳು ಇಂತಹ ಪುರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಹಿತ ದೃಷ್ಟಿಯಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.