Home Crime ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಸಾವು…!!

ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಸಾವು…!!

ಕಾರ್ಕಳ: ಬೃಹತ್ ಗಾತ್ರದ ವಿದ್ಯುತ್ ಕಂಬ ಅಳವಡಿಸುವ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಬಜಗೋಳಿಯ ಮುಡ್ರಾಲು ಕ್ರಾಸ್ ನಲ್ಲಿ ನಡೆದಿದೆ.

ಯುವಕ 11 ಮೀಟರ್ ಎತ್ತರದ ಬೃಹತ್ ವಿದ್ಯುತ್ ಕಂಬವನ್ನು ಏರಿದ್ದ. ಈ ವೇಳೆ ಮಳೆ ಸುರಿಯುತ್ತಿದ್ದು, ಜೊತೆಗೆ ಸಿಡಿಲು ಬಡಿದ ಆಘಾತದಿಂದಾಗಿ ಯುವಕ ಕೆಳಕ್ಕೆ ಬಿದ್ದು, ಪ್ರಾಣಕಳೆದುಕೊಂಡಿದ್ದಾನೆ.

ಕಂಟ್ರಾಕ್ಟರ್ ದಾರರೊಂದಿಗೆ ಆ ಯುವಕ ದುಡಿಯುತ್ತಿದ್ದನು. ಮೃತ ಯುವಕ ಅಸ್ಸಾಂ ಮೂಲದವನೆಂದು ತಿಳಿದುಬಂದಿದೆ. ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.