ಬೆಂವಿವಿಯ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ 195ನೇ ಜಯಂತಿಯ ಸರ್ವರಿಗೂ ಪ್ರೇರಣೆ…
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ಮಾತೆ ‘ಸಾವಿತ್ರಿ ಬಾಯಿ ಫುಲೆ’ ಅವರ 195ನೇ ಜಯಂತಿ ಸಮಾರಂಭದ ಅಂಗವವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮಾತೆ ಸಾವಿತ್ರಿ ಬಾಯಿ ಫುಲೆ ರವರ ಉದ್ದೇಶಿಸಿ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿದ ಶಿಕ್ಷಣ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎಂ.ಸಿ. ಎರ್ರಿಸ್ವಾಮಿರವರು ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಇವರ ಬಗ್ಗೆ ಹೆಚ್ಚು ಹೆಚ್ಚಾಗಿ ಪುಸ್ತಕಗಳನ್ನು ಓದಬೇಕು. ಸಾವಿತ್ರಿ ಬಾಯಿ ಫುಲೆ ಅವರು ಒಬ್ಬ ಶಿಕ್ಷಕಿಯಾಗಿ ಇವರ ಸೇವೆ ನಮ್ಮ ಸಮಾಜಕ್ಕೆ ದಾರಿ ದ್ವೀಪ ಇದ್ದಂತೆ, ಇವರ ಕೊಡುಗೆ ಅಪಾರ, ಸಮಾಜದ ಬೆಳಕಾಗಿ, ಕವಿಯಾಗಿ ತಮ್ಮ ಜೀವನ ಉದ್ದಕ್ಕೂ ಹಗಲಿರುಳು ಶ್ರಮಿಸಿದ ಹೆಮ್ಮೆಯ ಮಾತೆ ಎಂದು ಅಭಿಮತ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ವಿದ್ಯುನ್ಮಾನ ವಿಭಾಗದ ಪ್ರಾಧ್ಯಾಪಕರಾದ ಡಾ.ವಾಹಿನಿ ಅರವಿಂದ್ ಮಾತನಾಡಿದ ಅವರು ನನ್ನ ಅಧ್ಯಯನಕ್ಕೆ ಪೂರಕವಾಗಿ ಇಲ್ಲಿ ನನ್ನ ತಾತ ಅಜ್ಜ, ನನ್ನ ಅಪ್ಪ, ನನ್ನ ಮಾವ ಅಧ್ಯಾಪಕರಾಗಿದ್ದರು. ಪ್ರಮುಖ ಕ್ಷೇತ್ರಗಳೆಂದರೆ ಇವು ಅಧ್ಯಾಪಕ ವೃತ್ತಿ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಇಡೀ ಸಮಾಜಕ್ಕೆ ಮಾದರಿ. ಹಾಗೆ ಮಾತೆ ಸಾವಿತ್ರಿ ಬಾಯಿ ಪುಲೆರವರು ಆ ಕಾಲಘಟ್ಟದಲ್ಲಿ ಎಲ್ಲಾ ಮಹಿಳೆಯರ ಸಬಲೀಕರಣಕ್ಕಾಗಿ ಅಗಲಿರಲು ಶ್ರಮಿಸಿದವರು, ನಮ್ಮ ಸಮಾಜದಲ್ಲಿ ಹೆಣ್ಣು-ಗಂಡು ಸಮಾನವಾಗಿ ಶಾಲೆ ಆರಂಭಿಸಿದರು ಎಂದರು.
ಮನಸ್ಮೃತಿಯಲ್ಲಿರುವ ಕಟ್ಟುಪಾಡುಗಳ ವಿರುದ್ಧ
ಹೋರಾಡಿದವರು. ಅಂಬೇಡ್ಕರ ಸಹ ಇವರ ಆದರ್ಶ ಚಿಂತನೆಗಳು ಸಂವಿಧಾನದಲ್ಲಿ ಅಳವಡಿಸಿದ್ದು ವಿಶೇಷ ಸಂಗತಿ. ಶಿಕ್ಷಣದ ಹಕ್ಕು ಇದೆ ಪ್ರತಿಯೊಬ್ಬರೂ ಕೂಡ ಸಮರ್ಥವಾಗಿ ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಸಂಸ್ಕಾರವಿದ್ದರೆ ಮಾತ್ರ ನಾವು ಇನ್ನೊಬ್ಬರಿಗೆ ಸಂಸ್ಕಾರ ಹೇಳಬಹುದು. ಮುಂದಿನ ದಿನಗಳಲ್ಲಿ ಸಾವಿತ್ರಿ ಬಾಪುಲೆ ಅವರ ವಿಚಾರಧಾರೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು ಅಂದಿನ ದಿನಗಳಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆರವರು ಅನುಭವಿಸಿದ ಸಾಕಷ್ಟು ನೋವು, ನಮ್ಮ ಕಣ್ಣು ಒದ್ದೆಯಾಗುತ್ತದೆ. ಶಿಕ್ಷಕರಾದವರು ತಮ್ಮ ಒತ್ತಡವನ್ನು ಮಕ್ಕಳ ಮುಂದೆ ಹೇಳಬಾರದು. ನಮ್ಮನ್ನು ದ್ವೇಷಿಸುವರು ಇರುತ್ತಾರೆ ನಮ್ಮ ಗುರಿ ಆತ್ಮಸ್ಥೈರ್ಯ ನಮಗೆ ಪ್ರೇರಣೆ ಆಗಬೇಕು. ನಂತರ ಅಧ್ಯಾಪಕರು ಅದವರು ನಾವು ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ,
ದುರಂತ ಎಂದರೆ ಸಾವಿತ್ರಿ ಬಾಯಿ ಫುಲೆರವರು ಶಿಕ್ಷಣ ಕಳಿಸುವ ಸಂದರ್ಭದಲ್ಲಿ ದಾರಿಯಲ್ಲಿ ಹೋಗವಾಗ ಸಗಣಿ ಎರಚುವುದು ಇಂತಹ ಸನ್ನಿವೇಶ ಕಂಡು ಬಂದಿದ್ದರು ಕೂಡ ಎದ್ದೆ ಗುದ್ದದೇ ಧೈರ್ಯದಿಂದ ಅಸಂಖ್ಯಾತ ಮಹಿಳೆಯರಿಗೆ, ಮಕ್ಕಳಿಗೆ ಶಿಕ್ಷಣ ನೀಡಿದ್ದು ಹೆಮ್ಮೆಯ ಸಂಗತಿ ಎಂದರು.
ಕೋಟ್:
ಸಾವಿತ್ರಿ ಬಾಯಿ ಪುಲೆ ನಮಗೆ ಬೆಳಕಾಗಿದ್ದಾರೆ ಬೆಳಕಲ್ಲಿ ನಾವು ಕುಂತಿದ್ದೇವೆ ನಮ್ಮನ್ನು ನಾವು ಬೆಳೆಸಿಕೊಂಡರೆ ಸಮಾಜದಲ್ಲಿ ಬದಲಾವಣೆಗೆ ಸಾಧ್ಯ, ಹುಟ್ಟುತ್ತಾ ಯಾರೂ ಕೆಟ್ಟವರೆಲ್ಲ ಪರಿವರ್ತನೆಯ ಜಗದ ನಿಯಮ ಅದು ಶಿಕ್ಷಕರ ಜವಾಬ್ದಾರಿಯಾಗಬೇಕು.
- ಡಾ. ವಾಹಿನಿ ಅರವಿಂದ್
ಫೋಟೋ ಕ್ಯಾಪ್ಷನ್:
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಿಂದ ಆಯೋಜಿಸಿದ್ದ ಮಾತೆ ‘ಸಾವಿತ್ರಿ ಬಾಯಿ ಫುಲೆ’ ಅವರ 195ನೇ ಜಯಂತಿ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ
ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಶಿಕ್ಷಣ ವಿಭಾಗದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರರಾದ ಡಾ. ವಾಣಿಶ್ರೀ ಕೊಪ್ಪದ, ಹಿರಿಯ ಪ್ರಾಧ್ಯಾಪಕರಾದ ಡಾ. ಎಂ.ಸಿ. ಎರ್ರಿಸ್ವಾಮಿ, ಡಾ. ವಾಹಿನಿ ಅರವಿಂದ್ ಇದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಣ ವಿಭಾಗದ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದ, ವಿದ್ಯುನ್ಮಾನ ವಿಭಾಗದ ಪ್ರಾಧ್ಯಾಪಕರಾದ ಡಾ.ವಾಹಿನಿ ಅರವಿಂದ್, ಶಿಕ್ಷಣ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಎಂ.ಸಿ. ಎರ್ರಿಸ್ವಾಮಿರವರು, ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾರ್ಥಿಗಳು, ಪ್ರಥಮ ಮತ್ತು ದ್ವಿತೀಯ ವರ್ಷದ ಎಂ.ಇಡಿ ಪ್ರಶಿಕ್ಷಾಣಾರ್ಥಿಗಳು, ಮಾತೆ ಸಾವಿತ್ರಿ ಬಾಯಿ ಫುಲೆರವರ ಅಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.




